ಧಾರವಾಡ  (ಡಿ.19): ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಜ.೦4 ರಿಂದ ಮೂರು ದಿನಗಳ ಕಾಲ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದೆ.

ಜ.04 ರಂದು ಬೆಳಗ್ಗೆ 11 ಕ್ಕೆ ನಡೆಯುವ ಸಮಾರಂಭದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. 

ಧಾರ​ವಾ​ಡದ ಗರಿಮೆಗಳಾದ ಕರ್ನಾ​ಟಕ ವಿದ್ಯಾ​ವ​ರ್ಧಕ ಸಂಘ, ಕರ್ನಾ​ಟಕ ವಿಶ್ವ​ವಿ​ದ್ಯಾ​ಲಯ, ಡಯಟ್‌ ಹಾಗೂ ಸಾಹಿತ್ಯ ಮತ್ತು ಸಂಗೀ​ತದ ಹಿನ್ನೆ​ಲೆಯ ಕಲ್ಪ​ನೆ​ಯಲ್ಲಿ ಕಲಾವಿದ ಮಹೇಶ ಪತ್ತಾರ ರಚಿ​ಸಿದ  ಲಾಂಛನವನ್ನು ಕಂದಾಯ ಸಚಿವ ಆರ್‌.ವಿ. ದೇಶ​ಪಾಂಡೆ ಬಿಡು​ಗಡೆ ಮಾಡಿ​ದರು.

ಕನ್ನಡ ಸಾಹಿತ್ಯ ಪರಿ​ಷತ್‌ ಲಾಂಛನ ಸೇರಿ ಕನ್ನ​ಡದ ಬಾವುಟ, ಹುಬ್ಬ​ಳ್ಳಿಯ ಕಿತ್ತೂರು ಚೆನ್ನಮ್ಮನ ಪ್ರತಿಮೆ, ಪುಸ್ತ​ಕ​ಗಳ ಹೊತ್ತಿಗೆ, ಸಂಗೀ​ತದ ಪರಿ​ಕ​ರ​ಗ​ಳನ್ನು ಒಳ​ಗೊಂಡ ಲಾಂಛನ ಇದಾಗಿದೆ. ಲಾಂಛನ ಬಿಡುಗಡೆ ಜತೆಗೆ, ಸಮ್ಮೇ​ಳ​ನದ ಮಾಹಿತಿ ಇಡೀ ಜಗ​ತ್ತಿಗೆ ಪಸ​ರಿ​ಸಲು ಸಿದ್ಧ​ವಾದ ವೆಬ್‌​ಸೈಟ್‌(  (abkssdwd.org) ಅನ್ನು ಸಹ ಜಿ.ಪಂ. ಸಭಾಂಗ​ಣ​ದಲ್ಲಿ ನಡೆದ ಸಮ್ಮೇ​ಳ​ನದ ಪೂರ್ವ​ಭಾವಿ ಸಭೆ​ಯಲ್ಲಿ ಸಚಿ​ವರು ಲೋಕಾ​ರ್ಪ​ಣೆ​ಗೊ​ಳಿ​ಸಿ​ದರು.