ಮರುತಿಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದುನಿಯಾ ವಿಜಿಗೆ ಪ್ರಾಬ್ಲಂ ಮೇಲೆ ಪ್ರಾಬ್ಲಂ ಎದುರಾಗುತ್ತಿವೆ. ಈಗಾಗಲೇ ಮಾರುತಿಗೌಡ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ವಿಜಿಯನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.
ಬೆಂಗಳೂರು, [ಸೆ.24]: ಮರುತಿಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದುನಿಯಾ ವಿಜಿಗೆ ಪ್ರಾಬ್ಲಂ ಮೇಲೆ ಪ್ರಾಬ್ಲಂ ಎದುರಾಗುತ್ತಿವೆ. ಈಗಾಗಲೇ ಮಾರುತಿಗೌಡ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ವಿಜಿಯನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.
ದುನಿಯಾ ವಿಜಿ ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಚಿತ್ರರಂಗದ ಘನತೆ ಗೌರವಕ್ಕೆ ದಕ್ಕೆ ತರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಿಯನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸುವಂತೆ ಕರ್ನಾಟಕ ಸಂಘಟನೆ ಒಕ್ಕೂಟ ಆಗ್ರಹಿಸಿದೆ.
ವಿಜಿಯನ್ನು ಬ್ಯಾನ್ ಮಾಡುವಂತೆ ಇಂದು ಫಿಲಂ ಚೇಂಬರ್ಗೆ ಕರ್ನಾಟಕ ಸಂಘಟನೆ ಒಕ್ಕೂಟದ ಅಧ್ಯಕ್ಷ ನಾಗೇಶ್ ದೂರು ನೀಡಿದ್ದಾರೆ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ದುನಿಯಾ ವಿಜಿ ಅವರ ಹೆಸರು ಕೇಳಿಬರುತ್ತಿದ್ದು, ಈ ಬಗ್ಗೆ ಫಿಲಂ ಚೇಂಬರ್ ಸಹ ಗಂಭೀರವಾಗಿ ತೆಗೆದುಕೊಂಡಿದೆ.
