ಮೊತ್ತವನ್ನು 1 ಲಕ್ಷದಿಂದ 3 ಲಕ್ಷಕ್ಕೆ ಏರಿಸುವುದರ ಜೊತೆ  ನೀಡುವ ಚಿನ್ನ 20 ಗ್ರಾಮ್ ನಿಂದ 25 ಗ್ರಾಂಗೆ ಏರಿಸುವ ಬಗ್ಗೆ ಕೂಡಾ ಪ್ರಸ್ತಾವನೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಬೆಂಗಳೂರು(ಅ.23): ಪ್ರಸ್ತುತ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ನೀಡಿದೆ.

ಮೊತ್ತವನ್ನು 1 ಲಕ್ಷದಿಂದ 3 ಲಕ್ಷಕ್ಕೆ ಏರಿಸುವುದರ ಜೊತೆ ನೀಡುವ ಚಿನ್ನ 20 ಗ್ರಾಮ್ ನಿಂದ 25 ಗ್ರಾಂಗೆ ಏರಿಸುವ ಬಗ್ಗೆ ಕೂಡಾ ಪ್ರಸ್ತಾವನೆಯಲ್ಲಿ ಉಲ್ಲೇಖ ಮಾಡಲಾಗಿದೆ. ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದರೆ ಈ ವರ್ಷವೇ ಮೊತ್ತ ಹೆಚ್ಚಳವಾಗುವ ಸಾಧ್ಯತೆಯಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ ಇತರ ಎಲ್ಲಾ ರಾಜ್ಯ ಪ್ರಶಸ್ತಿಗಳ ಮೊತ್ತ 3 ಲಕ್ಷ ರೂ. ಇದೆ. ರಾಜ್ಯ ಸರ್ಕಾರದಿಂದ ನೀಡುವ ರಾಷ್ಟ್ರೀಯ ಪುರಸ್ಕಾರಗಳ ಮೊತ್ತ 10 ಲಕ್ಷದವರೆಗೂ ಇದೆ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಹೆಚ್ಚಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮನವಿ ಮಾಡಿದೆ.