ಸಂಪಿಗೆ ಚಿತ್ರಮಂದಿರದ ಬಳಿ ಕಾರ್ಯಕರ್ತರ ಜೊತೆ ಬಂದು ಪ್ರತಿಭಟನೆ ನಡೆಸಿದ ವಾಟಾಳ್​ ನಾಗರಾಜ್, ಕರಾವೆ ಪ್ರವೀಣ್​ ಶೆಟ್ಟಿ ಹಾಗೂ ಶಿವರಾಮೇಗೌಡ ತಮಿಳಿಗರ ಉದ್ಧಟತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು

ಬೆಂಗಳೂರು(ಅ.18): ತಮಿಳಿನ ಸೂಪರ್​ ಸ್ಟಾರ್​ ವಿಜಯ್​ ಅಭಿನಯದ ಮಿರ್ಸಲ್ ಚಿತ್ರ ಪ್ರದರ್ಶನಕ್ಕೆ ಭಾರೀ ವಿರೋಧ ಕೇಳಿ ಬಂದಿದೆ. ನಿನ್ನೆ ರಾತ್ತಿ ಬೆಂಗಳೂರಿನ ಸಂಪಿಗೆ ಚಿತ್ರಮಂದಿರದ ಬಳಿ​ ನಡೆದ ಅಪಘಾತದಿಂದ ಶುರುವಾದ ಜಗಳ ಕನ್ನಡಿಗರು ಹಾಗೂ ತಮಿಳಿಗರ ನಡುವೆ ಜಟಾಪಟಿಗೆ ಕಾರಣವಾಗಿತ್ತು.

ಇದೇ ವೇಳೆ ತಮಿಳಿಗರು ಕನ್ನಡಿಗರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಮಾಡಿದ ಕನ್ನಡ ಪರ ಸಂಘಟನೆಗಳು ಚಿತ್ರ ಪ್ರದರ್ಶನ ಬಂದ್ ಮಾಡುವಂತೆ ಆಗ್ರಹಿಸಿದ್ದರು. ಬೆಳಗಿನ ಆಟ ಪ್ರದರ್ಶಿಸಿ ಚಿತ್ರ ಮಂದಿರದ ಮಾಲೀಕರು ಮಧ್ಯಾಹ್ನ ಆಟದಿಂದ ಚಿತ್ರ ಪ್ರದರ್ಶನ ಬಂದ್​ ಮಾಡಿದರು. ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆ​ ಆಗದೇ ಇದ್ದರೂ ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆ ಮಾಡಿದ್ದಕ್ಕೆ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂಪಿಗೆ ಚಿತ್ರಮಂದಿರದ ಬಳಿ ಕಾರ್ಯಕರ್ತರ ಜೊತೆ ಬಂದು ಪ್ರತಿಭಟನೆ ನಡೆಸಿದ ವಾಟಾಳ್​ ನಾಗರಾಜ್, ಕರಾವೆ ಪ್ರವೀಣ್​ ಶೆಟ್ಟಿ ಹಾಗೂ ಶಿವರಾಮೇಗೌಡ ತಮಿಳಿಗರ ಉದ್ಧಟತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರ ಪ್ರದರ್ಶನ ಬಂದ್ ಮಾಡಿಸಿದ್ದಲ್ಲದೇ, ಬ್ಯಾನರ್ ಹಾಗೂ ಕಟೌಟ್'ಗಳನ್ನು ತೆರವು ಮಾಡಿಸಿ ರಾಜ್ಯಾದ್ಯಂತ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಆಗ್ರಹಿಸಿದರು. ಇದಷ್ಟೇ ಅಲ್ಲಿದೇ ಸಂಜೆ ವೇಳೆ ಬಾಣಸವಾಡಿಯ ಮುಕುಂದ ಚಿತ್ರಮಂದಿರದ ಬಳಿಯೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಚಿತ್ರ ಪ್ರದರ್ಶ ಬಂದ್ ಮಾಡುವಂತೆ ಒತ್ತಾಯಿಸಿದರು.