ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹಿರಿಯರು ಪಂಚಾಯ್ತಿ ಮಾಡಿ ಮಹಿಳೆಗೆ 6 ಸಾವಿರ ರೂಪಾಯಿ ದಂಡ ವಿಧಿಸಿದ್ರು. ಆಗ ಆ ಮಹಿಳೆ ಮತ್ತು ಆಕೆಯ ಗಂಡ ಹಣ ಭರಿಸುವುದಕ್ಕೆ ತಮಗೆ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ರು. ಆದರೆ, ಸಮಯ ಕೊಡದ ಪಂಚಾಯ್ತಿ ಮುಖಂಡರು ಪತಿಗೆ ಪತ್ನಿಯ ತಲೆ ಕೂದಲು ಕತ್ತರಿಸಲು ಆದೇಶಿಸಿದ್ದಾರೆ.

ಮುರ್ಷಿದಾಬಾದ್(ಅ.14): ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆಂಬ ಕಾರಣಕ್ಕೆ ಗ್ರಾಮದ ಮುಖಂಡರು ಮಹಿಳೆಯೊಬ್ಬಳ ತಲೆ ಕೂದಲು ಬೋಳಾಗಿಸಿದ್ದಾರೆ. ಪತಿಯ ಕೈಯಿಂದಲೇ ಈ ಕೆಲಸ ಮಾಡಿಸಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹಿರಿಯರು ಪಂಚಾಯ್ತಿ ಮಾಡಿ ಮಹಿಳೆಗೆ 6 ಸಾವಿರ ರೂಪಾಯಿ ದಂಡ ವಿಧಿಸಿದ್ರು. ಆಗ ಆ ಮಹಿಳೆ ಮತ್ತು ಆಕೆಯ ಗಂಡ ಹಣ ಭರಿಸುವುದಕ್ಕೆ ತಮಗೆ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ರು. ಆದರೆ, ಸಮಯ ಕೊಡದ ಪಂಚಾಯ್ತಿ ಮುಖಂಡರು ಪತಿಗೆ ಪತ್ನಿಯ ತಲೆ ಕೂದಲು ಕತ್ತರಿಸಲು ಆದೇಶಿಸಿದ್ದಾರೆ.

ಪಂಚಾಯಿತಿ ಒತ್ತಡಕ್ಕೆ ಮಣಿದು ಪತಿ ಗ್ರಾಮಸ್ಥರ ಸಮ್ಮುಖದಲ್ಲಿ ಪತ್ನಿ ಕೂದಲು ಕತ್ತರಿಸಿ ಹಾಕಿದ್ದಾನೆ.