ಕೊಪ್ಪಳ :  ಕೊಪ್ಪಳದ ಬಿಜೆಪಿ ಶಾಸಕರೋರ್ವರು ಜೆಡಿಎಸ್ ಸೇರಲಿದ್ದಾರ ಎನ್ನುವ ಸುದ್ದಿಯೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ. 

ಕೊಪ್ಪಳದ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರ್ ಜೆಡಿಎಸ್ ಗೆ ತೆರಳಲಿದ್ದಾರೆ ಎನ್ನುವ ವದಂತಿ ಹಬ್ಬಿದೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆಪ್ತರಾದ ಬಸವರಾಜ, ವೆಂಕಟರಾವ್ ನಾಡಗೌಡ  ನೇತೃತ್ವದಲ್ಲಿ ಜೆಡಿಎಸ್ ಸೇರಲಿದ್ದಾರೆ ಎಂದು ಹೇಳಲಾಗಿದೆ. 

ನಾಡಗೌಡ ಜೊತೆಗೆ ಬಸವರಾಜು ಅವರು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಫೊಟೊ ಒಂದು ವೈರಲ್ ಆಗಿದೆ. ಇದರಿಂದ ಹಲವು ದಿನಗಳಿಂದ ಇರುವ ವದಂತಿಗೆ ಇದೀಗ ಪುಷ್ಟಿ ಸಿಕ್ಕಿದಂತಾಗಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ವಿರುದ್ಧ ಸ್ಪರ್ಧಿಸಿ ಬಸವರಾಜ್ ಗೆಲುವು ಸಾಧಿಸಿದ್ದು, ಇದೀಗ ಫೊಟೊ ವೈರಲ್ ಆಗಿದ್ದರಿಂದ ಬಿಜೆಪಿ ಪಾಳಯದಲ್ಲಿ ತಳಮಳ ಎದುರಾಗಿದೆ.