ರಜನಿಕಾಂತ್ ಪಕ್ಷದೊಂದಿಗೆ ಕೈ ಜೋಡಿಸಲಿದ್ದಾರಾ ಕಮಲ್ ಹಾಸನ್..?

First Published 9, Feb 2018, 12:33 PM IST
Kamal Haasan hints at tie up with Rajinikanth for Tamil Nadu polls
Highlights

ತಮಿಳುನಾಡಿನಲ್ಲಿ ಸ್ಟಾರ್ ನಟರ ರಾಜಕೀಯ ಪ್ರವೇಶದಿಂದ ರಾಜಕಾರಣವು ಸಾಕಷ್ಟು ರಂಗೇರುತ್ತಿದೆ. ಇತ್ತೀಚೆಗಷ್ಟೇ ನಟ ರಜನಿಕಾಂತ್ ಅವರು ತಮಿಳುನಾಡಿನಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ತಮ್ಮದೇ ಆದ ನೂತನ ಪಕ್ಷವನ್ನು ಘೋಷಣೆ ಮಾಡಿದ್ದರು.

ಚೆನ್ನೈ : ತಮಿಳುನಾಡಿನಲ್ಲಿ ಸ್ಟಾರ್ ನಟರ ರಾಜಕೀಯ ಪ್ರವೇಶದಿಂದ ರಾಜಕಾರಣವು ಸಾಕಷ್ಟು ರಂಗೇರುತ್ತಿದೆ. ಇತ್ತೀಚೆಗಷ್ಟೇ ನಟ ರಜನಿಕಾಂತ್ ಅವರು ತಮಿಳುನಾಡಿನಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ತಮ್ಮದೇ ಆದ ನೂತನ ಪಕ್ಷವನ್ನು ಘೋಷಣೆ ಮಾಡಿದ್ದರು.

 ಅದರ ಬೆನ್ನಲ್ಲೇ ನಟ ಕಮಲ್ ಹಾಸನ್ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭ ಮಾಡುವ ಬಗ್ಗೆಯೂ ಕೂಡ ಸುಳಿವು ನೀಡಿದ್ದರು. ಆದರೆ ಅವರು ತಮ್ಮದೇ ಆದ ಪಕ್ಷವನ್ನು ಘೋಷಣೆ ಮಾಡುತ್ತಾರೋ ಅಥವಾ ಯಾವುದಾದರೂ ರಾಜಕೀಯ ಪಕ್ಷದೊಂದಿಗೆ ಕೈ ಜೋಡಿಸುತ್ತಾರೋ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು.

ಆದರೆ ಇದೀಗ ರಜನಿಕಾಂತ್ ಅವರ ಪಕ್ಷದೊಂದಿಗೆ ಕೈ ಜೋಡಿಸಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸುವ ಬಗ್ಗೆ ಕಮಲ್ ಹಾಸನ್ ಸುಳಿವು ನೀಡಿದ್ದಾರೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಇನ್ನೂ ಯಾವುದೇ ರೀತಿಯಾದ ತೀರ್ಮಾನವನ್ನು ಕೈಗೊಂಡಿಲ್ಲ ಸಮಯವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ. ಇನ್ನು ರಜನಿಕಾಂತ್ ಅವರೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ  ಇದೇ ರೀತಿಯಾದ ಉತ್ತರವನ್ನೇ ನೀಡಿದ್ದಾರೆ.

loader