ರಾಜಕೀಯ ಪಕ್ಷ ಸ್ಥಾಪನೆ ಸಿದ್ಧತೆ ಯಲ್ಲಿರುವ ದಕ್ಷಿಣ ಭಾರತದ ಹೆಸರಾಂತ ಚಿತ್ರನಟ ಕಮಲ್ ಹಾಸನ್ ಅವರಿಗೆ ಆಗಲೇ ಜನರು ಶುಭ ಹಾರೈಸಿ, ಹಣ ರವಾನಿಸಲು ಆರಂಭಿಸಿದ್ದಾರೆ. ಆದರೆ ಆ ಹಣವನ್ನೆಲ್ಲಾ ವಾಪಸ್ ಕಳುಹಿಸುವುದಾಗಿ ಕಮಲ್ ಘೋಷಿಸಿದ್ದಾರೆ. 

ನವದೆಹಲಿ: ರಾಜಕೀಯ ಪಕ್ಷ ಸ್ಥಾಪನೆ ಸಿದ್ಧತೆ ಯಲ್ಲಿರುವ ದಕ್ಷಿಣ ಭಾರತದ ಹೆಸರಾಂತ ಚಿತ್ರನಟ ಕಮಲ್ ಹಾಸನ್ ಅವರಿಗೆ ಆಗಲೇ ಜನರು ಶುಭ ಹಾರೈಸಿ, ಹಣ ರವಾನಿಸಲು ಆರಂಭಿಸಿದ್ದಾರೆ.

ಆದರೆ ಆ ಹಣವನ್ನೆಲ್ಲಾ ವಾಪಸ್ ಕಳುಹಿಸುವುದಾಗಿ ಕಮಲ್ ಘೋಷಿಸಿದ್ದಾರೆ. ಹಾಗಂತ, ತಾವು ರಾಜಕೀಯ ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ ಎಂದಿರುವ ಅವರು, ಪ್ರಧಾನಿ ಮೋದಿ ಅವರ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡುವ ಸುಳಿವನ್ನೂ ನೀಡಿದ್ದಾರೆ.

‘ಜನರು ನನಗೆ ಪತ್ರಗಳು ಹಾಗೂ ಹಣ ರವಾನಿಸಲು ಆರಂಭಿಸಿದ್ದಾರೆ. ಆದರೆ ನಾನು ಈಗ ಅದನ್ನೆಲ್ಲಾ ಸ್ವೀಕರಿಸಿದರೆ ಕಾನೂನುಬಾಹಿರವಾಗುತ್ತದೆ. ಆದ ಕಾರಣ ಅಷ್ಟೂ ದೇಣಿಗೆಯನ್ನು ವಾಪಸ್ ಕಳುಹಿಸುತ್ತಿದ್ದೇನೆ’ ಎಂದು ತಮಿಳು ನಿಯತಕಾಲಿಕೆಯೊಂದರಲ್ಲಿ ಕಮಲ್ ಅವರು ಲೇಖನ ಬರೆದಿದ್ದಾರೆ.

‘ಹಾಗಂತ ನಾನು ಇಟ್ಟ ಹೆಜ್ಜೆಯನ್ನು ಹಿಂದಿಡುತ್ತಿದ್ದೇನೆ ಎಂದು ಭಾವಿಸಬೇಡಿ. ಹಣ ಸ್ವೀಕರಿಸುವ ಮುನ್ನ ಮೂಲ ಸೌಕರ್ಯವನ್ನು ಸೃಷ್ಟಿಸಬೇಕಾಗಿದೆ. ಜನರು ತಾವಾಗಿಯೇ ಹಣ ಕಳುಹಿಸಲು ಆರಂಭಿಸಿದ

ತಕ್ಷಣವೇ ರಾಜಕೀಯ ಪಕ್ಷ ಆರಂಭವಾಗಿದೆ. ಆದರೆ ನಾನು ತಕ್ಕ ಮೂಲಸೌಕರ್ಯಗಳನ್ನು ಸೃಷ್ಟಿಸಬೇಕಾಗಿದೆ. ನನ್ನ ನಂತರವೂ ಈ ಚಳವಳಿ ಮುಂದುವರಿಯಬೇಕು. ಜನರ ಕಲ್ಯಾಣಕ್ಕೆ ಈವರೆಗೆ 30 ಕೋಟಿ ಹರಿದು ಬಂದಿದೆ. ಸತ್ಯ ಏನೆಂದರೆ, ಅಷ್ಟು ಹಣವನ್ನು ಹೊಂದಿಸಲು ನನ್ನಿಂದ ಆಗಲ್ಲ,’ಎಂದರು.

ಜನರನ್ನು ಭೇಟಿ ಮಾಡುವ ಕೆಲಸ ಆರಂಭಿಸಿದ್ದೇನೆ. ನಾನು ಹಿಂದು ಭಯೋತ್ಪಾದನೆ ಎಂಬ ಪದ ಬಳಸಿಲ್ಲ. ಕಾಂಗ್ರೆಸ್ ಪಕ್ಷ ಪದಗಳಲ್ಲಿ ಆಟವಾಡುತ್ತಿದೆ ಎಂದು ಟೀಕಿಸಿದ್ದಾರೆ.