ತ್ರಿವರ್ಣ ಧ್ವಜದ ಕೇಸರಿ ಇಡೀ ಧ್ವಜಕ್ಕೆ ಹಬ್ಬಬಾರದು: ಕಮಲ್ ಹೊಸ ವಿವಾದ

Kamal Haasan Controversial Statement
Highlights

  • ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಆದರೆ ಅದು ಇಡೀ ಧ್ವಜವನ್ನು ವ್ಯಾಪಿಸಬಾರದು
  • ತಮಿಳು ವಾರಪತ್ರಿಕೆ ‘ಆನಂದ ವಿಕಟಂ’ಗೆ ಅಂಕಣ ಬರೆದಿರುವ ಕಮಲ್

ಚೆನ್ನೈ: ತ್ರಿವರ್ಣ ಧ್ವಜದಲ್ಲೂ ಕೇಸರಿ ಇದೆ. ಆದರೆ ಅದು ಇಡೀ ಧ್ವಜವನ್ನು ವ್ಯಾಪಿಸಬಾರದು ಎಂದು ನಟ ಹಾಗೂ ಮಕ್ಕಳ ನೀದಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

ಈ ಮೂಲಕ ತಮ್ಮ ರಾಜಕೀಯ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ತಮಿಳು ವಾರಪತ್ರಿಕೆ ‘ಆನಂದ ವಿಕಟಂ’ಗೆ ಅಂಕಣ ಬರೆದಿರುವ ಕಮಲ್, ‘ನನ್ನ ರಾಜಕೀಯವು ಜಾತಿ ಮತ್ತು ಧರ್ಮಗಳಿಂದ ಮುಕ್ತವಾಗಿದ್ದಾಗಿದೆ. ಹಾಗಂತ ನಾನು ಹಿಂದೂ ಧರ್ಮ ವಿರೋಧಿ ಅಲ್ಲ. ತ್ರಿವರ್ಣಧ್ವಜದಲ್ಲಿ ಕೇಸರಿಗೂ ಸ್ಥಾನಮಾನವಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಆದರೆ ಕೇಸರಿಯೇ ಇಡೀ ಧ್ವಜ ವ್ಯಾಪಿಸಿದರೆ ಚೆನ್ನಾಗಿರದು. ಇತರರಿಗೂ ಸ್ಥಳಾವಕಾಶ ಮತ್ತು ಗೌರವ ನೀಡಬೇಕು. ಇದೇ ಶಪಥವನ್ನು ನಾವು ಮಾಡಿದ್ದೇವೆ. ಸಂವಿಧಾನದಲ್ಲೂ ಇದನ್ನೇ ಹೇಳಲಾಗಿದೆ’ ಎಂದರು.

loader