ಸಚಿವ ಯು.ಟಿ. ಖಾದರ್ ಪ್ರವೇಶಿಸಿದ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಇನ್ನೊಮ್ಮೆ ಬ್ರಹ್ಮಕಲಶ (ಶುದ್ಧಿ) ನಡೆಸಬೇಕು ಎಂದು ಆರ್‌ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿರುವರೆನ್ನಲಾದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರು: ಸಚಿವ ಯು.ಟಿ. ಖಾದರ್ ಪ್ರವೇಶಿಸಿದ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಇನ್ನೊಮ್ಮೆ ಬ್ರಹ್ಮಕಲಶ (ಶುದ್ಧಿ) ನಡೆಸಬೇಕು ಎಂದು ಆರ್‌ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿರುವರೆನ್ನಲಾದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಂಟ್ವಾಳದ ಕೈರಂಗಳದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ನಡೆದ ದನಗಳ್ಳತನ ಖಂಡಿಸಿ ಬುಧವಾರ ನಡೆದ ಉಪವಾಸ ಸತ್ಯಾಗ್ರಹ ವೇಳೆ ಕಲ್ಲಡ್ಕ ಈ ಮಾತುಗಳನ್ನು ಆಡಿದರೆನ್ನಲಾಗಿದೆ.

‘ಖಾದರ್‌ರಂತ ಗೋಮಾಂಸ ಭಕ್ಷಕರನ್ನು ಪವಿತ್ರ ದೇವಾಲಯ ಹಾಗು ದೈವಸ್ಥಾನಕ್ಕೆ ಕರೆಸಿ ಪ್ರಸಾದ ನೀಡು ತ್ತಿರುವುದು ಎಷ್ಟು ಸರಿ? ಖಾದರ್ ಪ್ರವೇ ಶಿಸಿದ ದೇವಾಲಯ ಹಾಗು ದೈವಸ್ಥಾನ ಗಳಲ್ಲಿ ಇನ್ನೊಮ್ಮೆ ಬ್ರಹ್ಮಕಲಶ ನಡೆಸ ಬೇಕು’ ಎಂದು ಕಲ್ಲಡ್ಕ ಹೇಳಿದ್ದಾರೆನ್ನಲಾಗಿದೆ.