ಮೀ ಟೂ ಅಭಿಯಾನದ ಮೂಲಕ ಬಹುಭಾಷಾ ನಟ ಅರ್ಜುನ್‌ ಸರ್ಜಾ ವಿರುದ್ಧ ಶ್ರುತಿ ಹರಿಹರನ್‌ ಮಾಡಿರುವ ಲೈಂಗಿಕ ಆರೋಪದ ಬಗ್ಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಪ್ರತಿಕ್ರಯಿಸಿದ್ದಾರೆ.

ಹಾವೇರಿ, [ಅ.28]: ಬಹುಭಾಷಾ ನಟ ಅರ್ಜುನ್‌ ಸರ್ಜಾ ವಿರುದ್ಧದ ಮೀ ಟೂ ಪ್ರಕಟರಣ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. 

ಮೀ ಟೂ ಅಭಿಯಾನದ ಮೂಲಕ ಬಹುಭಾಷಾ ನಟ ಅರ್ಜುನ್‌ ಸರ್ಜಾ ವಿರುದ್ಧ ಶ್ರುತಿ ಹರಿಹರನ್‌ ಮಾಡಿರುವ ಲೈಂಗಿಕ ಆರೋಪದ ಹಿಂದೆ ಷಡ್ಯಂತ್ರದ ಅನುಮಾನವಿದೆ. ಕ್ರಿಶ್ಚಿಯನ್‌ ಮಿಷನರಿಗಳ ಕೈವಾಡ ಇದ್ದರೂ ಇರಬಹುದು ಎಂದು ಆರ್‌ಎಸ್‌ಎಸ್‌ ಪ್ರಮುಖ ಕಲ್ಲಡ್ಕ ಪ್ರಭಾಕರ್‌ ಭಟ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂಗಳು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಾಗ ಇಂತಹ ಷಡ್ಯಂತ್ರ ನಡೆಯುತ್ತವೆ. 

ಅರ್ಜುನ್‌ ಸರ್ಜಾ ವಿರುದ್ಧವೂ ಇದೇ ರೀತಿ ಆಗಿರಬಹುದು. ಸರ್ಜಾ ಪರ ಇಡೀ ಚಿತ್ರತಂಡವೇ ಇದೆ. ಮೀ ಟೂ ಅಭಿಯಾನ ಒಳ್ಳೆಯದೆ. ಆದರೆ, ಅದನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.