ಈ ಐವರು ಪೊಲೀಸರು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದು, ನ.22ರಂದು ಉದ್ಯಮಿಯೊಬ್ಬನನ್ನು ಬೆದರಿಸಿ 35 ಲಕ್ಷ ರೂ. ಸುಲಿಗೆ ಮಾಡಿದ್ದರು.
ಬೆಂಗಳೂರು(ಡಿ.6): ಸಾರ್ವಜನಿಕರನ್ನು ರಕ್ಷಿಸಬೇಕಾದ ಆರಕ್ಷಕರೆ ಭಕ್ಷಕರಾದ ಘಟನೆ ಈಗ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಉದ್ಯಮಿಯೊಬ್ಬರಿಂದ 35 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಒರ್ವ ಎಸ್ಐ ಹಾಗೂ ನಾಲ್ವರು ಪೇದೆಗಳನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಎಸ್ಐ ಮಲ್ಲಿಕಾರ್ಜುನ್, ಪೇದೆಗಳಾದ ಗಿರೀಶ್, ಮಂಜುನಾಥ್, ಚಂದ್ರಶೇಖರ್, ಅನಂತರಾಜು ಬಂಧಿತರು.
ಈ ಐವರು ಪೊಲೀಸರು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದು, ನ.22ರಂದು ಉದ್ಯಮಿಯೊಬ್ಬನನ್ನು ಬೆದರಿಸಿ 35 ಲಕ್ಷ ರೂ. ಸುಲಿಗೆ ಮಾಡಿದ್ದರು. ಪೊಲೀಸರಿಗೆ ಸಹಕರಿಸಿದ್ದ ಜಾಫರ್ ಮತ್ತು ಭಾಸ್ಕರ್ ಕೂಡ ಬಂಧಿಸಲಾಗಿದ್ದು, ಇವರಿಂದ 16 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ನೊಂದ ಉದ್ಯಮಿ ದೂರು ನೀಡಿದ ಹಿನ್ನಲೆಯಲ್ಲಿ ಸೆರೆ ಹಿಡಿಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರೆ ರಾಬರಿಗಿಳಿದಿರುವ ಪ್ರಕರಣಗಳಲ್ಲಿ ಇದು ಮೂರನೆಯದಾಗಿದ್ದು, ಈ ಮೊದಲು ಗಿರಿನಗರ ಠಾಣೆಯ ಪೊಲೀಸರು ಈ ರೀ ಕೃತ್ಯವೆಸಗಿದ್ದರು.
