Asianet Suvarna News Asianet Suvarna News

104 ಉಪಗ್ರಹಗಳ ಉಡಾವಣೆದಾರನಿಗೆ ಇಸ್ರೋ ಅಧ್ಯಕ್ಷ ಪಟ್ಟ : ಜನವರಿ 14ಕ್ಕೆ ಕನ್ನಡಿಗ ಕಿರಣ್ ಕುಮಾರ್ ನಿವೃತ್ತಿ

ಕಳೆದ ವರ್ಷದ ಫೆಬ್ರವರಿಯಲ್ಲಿ ಶಿವನ್ ಅವರ ನೇತೃತ್ವದಲ್ಲಿ ಇಸ್ರೋ ಏಕ ಕಾಲದಲ್ಲಿ ಇಸ್ರೋ ಕಕ್ಷೆಗೆ 104 ಉಪಗ್ರಹಗಳನ್ನು ಉಡಾವಣೆಗೊಳಿಸಿ ದಾಖಲೆ ನಿರ್ಮಿಸಲಾಗಿತ್ತು

K Sivan appointed ISRO chairperson to replace AS Kiran Kumar

ನವದೆಹಲಿ(ಜ.10): ಒಂದೇ ಬಾರಿ 104 ಉಪಗ್ರಹಗಳನ್ನು ಅಂತರಿಕ್ಷ ಕಕ್ಷೆಗೆ ಉಡಾವಣೆಗೊಳಿಸಿದ ಕ್ಷಿಪಣಿ ತಜ್ಞ ಕೆ.ಶಿವನ್ ಅವರು ನೂತನ ಇಸ್ರೋ ಅಧ್ಯಕ್ಷರಾಗಿ ನೇಮಕರಾಗಿದ್ದಾರೆ. ಹಾಲಿ ಅಧ್ಯಕ್ಷ ಕನ್ನಡಿಗ ಎ.ಎಸ್. ಕಿರಣ್ ಕುಮಾರ್ ಅವರ ಅವಧಿ ಜನವರಿ 14ರಂದು ಕೊನೆಗೊಳ್ಳಲಿದೆ.

ಐಐಟಿ ಬಾಂಬೆಯ ಪದವೀಧರರಾಗಿರುವ ಶಿವನ್ ಅವರು ಪ್ರಸ್ತುತ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕರಾಗಿದ್ದಾರೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಶಿವನ್ ಅವರ ನೇತೃತ್ವದಲ್ಲಿ ಇಸ್ರೋ ಏಕ ಕಾಲದಲ್ಲಿ ಇಸ್ರೋ ಕಕ್ಷೆಗೆ 104 ಉಪಗ್ರಹಗಳನ್ನು ಉಡಾವಣೆಗೊಳಿಸಿ ದಾಖಲೆ ನಿರ್ಮಿಸಲಾಗಿತ್ತು.

ವಿಕ್ರಂ ಸಾರಾಭಾಯಿ, ಸತೀಶ್ ಧವನ್ ಹಾಗೂ ಯು.ಆರ್. ರಾವ್'ರಂಥ ಹಲವು ಮೇರು ಸಾಧಕರು ನಿರ್ವಹಿಸಿದ ಸ್ಥಾನದಲ್ಲಿ ನನ್ನನ್ನು ನೇಮಿಸುವುದಕ್ಕೆ ನಾನು ನಿಜವಾಗಲು ವಿನೀತ. ನನ್ನ ಆಡಳಿತಾವಧಿಯಲ್ಲಿ ಇಸ್ರೋ ವತಿಯಿಂದ ಅಂತರಿಕ್ಷಕ್ಕೆ ವಿನೂತನ ಉಪಗ್ರಹವನ್ನು ಸೇರಿಸುವುದು ನನ್ನ ಕನಸಾಗಿದೆ. ಹಾಸನ ಮೂಲದ  ಕನ್ನಡಿಗ ಎ.ಎಸ್.ಕಿರಣ್ ಕುಮಾರ್ ಅವರು ಜನವರಿ 12, 2015ರಂದು ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

Follow Us:
Download App:
  • android
  • ios