ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಲನಚಿತ್ರ ನಿರ್ಮಾಪಕ ಕೆ. ಮಂಜು ತೀವ್ರ ಕಸರತ್ತು ಆರಂಭಿಸಿದ್ದಾರೆ.

ಟಿಕೆಟ್‌ಗಾಗಿ ಕೆ. ಮಂಜು ಕಸರತ್ತು ತುಮಕೂರು ಜಿಲ್ಲೆ ತುರುವೇಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಲನಚಿತ್ರ ನಿರ್ಮಾಪಕ ಕೆ. ಮಂಜು ತೀವ್ರ ಕಸರತ್ತು ಆರಂಭಿಸಿದ್ದಾರೆ. ಬುಧವಾರ ಕೆಪಿಸಿಸಿ ಕಚೇರಿಗೆ ಆಗಮಿಸಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟರು. ಈ ಬಗ್ಗೆ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು, ಟಿಕೆಟ್ ನೀಡುವ ಬಗ್ಗೆ ಅಧಿಕೃತ ಭರವಸೆ ದೊರೆತಿಲ್ಲ ಎಂದು ತಿಳಿದುಬಂದಿದೆ.

ಮಂಗಳೂರು ಹಾಗೂ ಮೈಸೂರು ವಲಯದ ಸಭೆಗಳಲ್ಲಿ ರಮಾನಾಥ ರೈ, ತನ್ವೀರ್ ಸೇಠ್, ಗೀತಾ ಮಹದೇವಪ್ರಸಾದ್, ಪ್ರಮೋದ್ ಮಧ್ವರಾಜ್,ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಭಾಗಿಯಾಗಿದ್ದರು.