ದೆಹ​ಲಿ[ಆ.07]: 370ನೇ ವಿಧಿ ರದ್ದು ಮಾಡಿದ ಕೇಂದ್ರದ ನಿರ್ಧಾ​ರವನ್ನು ವಿರೋಧ ಮಾಡಿದ್ದ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ. ಒಂದೆಡೆ ಸೋನಿಯಾ ಮತ್ತು ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿದ್ದರೆ, ಕೆಲ ಹಿರಿ- ಕಿರಿ ನಾಯ​ಕರು ಬಹಿರಂಗವಾಗಿಯೇ ಸರ್ಕಾರದ ನಿರ್ಧಾರ ಬೆಂಬಲಿಸುವ ಮೂಲಕ ಪಕ್ಷಕ್ಕೆ ಸಡ್ಡು ಹೊಡೆದಿದ್ದಾರೆ.

ಅದರಲ್ಲೂ ರಾಹು​ಲ್‌ ಗಾಂಧಿ ಆಪ್ತ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌​ನ​ಲ್ಲಿ​ರುವ ಜ್ಯೋತಿ​ರಾ​ಧಿತ್ಯ ಸಿಂಧಿಯಾ ಕೇಂದ್ರದ ಪರ​ವಾಗಿ ನಿಂತಿದ್ದು ಕೈ ಪಾಲಿಗೆ ಹಿನ್ನ​ಡೆ​ಯಾ​ಗಿದೆ. ಈ ಸಂಬಂಧ ಟ್ವೀಟ್‌ ಮಾಡಿ​ರುವ ಅವರು ಕೇಂದ್ರದ ಈ ನಿರ್ಧಾ​ರ​ವನ್ನು ನಾನು ಬೆಂಬ​ಲಿ​ಸು​ತ್ತೇನೆ. ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಉತ್ತಮವಾಗುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಬಹುದಿತ್ತು. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತದೃಷ್ಟಿಯಿಂದ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಹೇಳಿ​ದ್ದಾ​ರೆ.

ಇನ್ನು ಕೈ ಹಿರಿಯ ನಾಯ​ಕರಾದ ಜನಾ​ರ್ಧನ್‌ ದ್ವಿವೇದಿ ಹಾಗೂ ದೀಪೆಂದರ್‌ ಹೂಡ 370ನೇ ವಿಧಿ​ಯನ್ನು ರದ್ದು ಮಾಡಿದ ಕೇಂದ್ರದ ನಿಲು​ವನ್ನು ಸ್ವಾಗತಿಸಿ​ದ್ದು, ರಾಷ್ಟ್ರತ ಹಿತ​ಕ್ಕಾಗಿ ಈ ನಿರ್ಧಾರ ತೆಗೆ​ದು​ಕೊಳ್ಳಲಾ​ಗಿದ್ದು ಹಾಗಾಗಿ ನಾವು ಕೇಂದ್ರದ ಈ ನಿರ್ಧಾ​ರ​ವ​ನ್ನು ಸ್ವಾಗ​ತಿ​ಸು​ತ್ತೇವೆ. ಇದ​ರಿಂದಾಗಿ ಕಾಶ್ಮೀರ ಸಂಬಂಧ ಉಂಟಾ​ಗಿ​ದ್ದ ಐತಿ​ಹಾಸಿಕ ಪ್ರಮಾ​ದ ಅಳಿ​ಸಿ​ದಂತಾ​ಗಿದೆ ಎಂದಿ​ದ್ದಾ​ರೆ.