ನ್ಯಾಯಾಂಗ ನಿಂದನೆ ಆರೋಪದಲ್ಲಿ 6 ತಿಂಗಳು ಜೈಲುಶಿಕ್ಷೆಗೆ ಗುರಿಯಾಗಿರುವ ಕಲ್ಕತ್ತಾ ನ್ಯಾ. ಸಿ.ಎಸ್ ಕರ್ಣನ್ ಬೇಷರತ್ ಕ್ಷಮೆಯಾಚಿಸಲು ಸಿದ್ಧರಿದ್ದಾರೆ. ಆದರೆ ಕೋರ್ಟ್ ನೊಂದಣಾಧಿಕಾರಿ ಅವರ ಅರ್ಜಿಯನ್ನು ಸ್ವೀಕರಿಸಲಿಲ್ಲವೆಂದು ಅವರ ಪರ ವಕೀಲ ಸುಪ್ರೀಂಕೋರ್ಟ್’ಗೆ ಹೇಳಿದ್ದಾರೆ.

ನವದೆಹಲಿ (ಮೇ.12): ನ್ಯಾಯಾಂಗ ನಿಂದನೆ ಆರೋಪದಲ್ಲಿ 6 ತಿಂಗಳು ಜೈಲುಶಿಕ್ಷೆಗೆ ಗುರಿಯಾಗಿರುವ ಕಲ್ಕತ್ತಾ ನ್ಯಾ. ಸಿ.ಎಸ್ ಕರ್ಣನ್ ಬೇಷರತ್ ಕ್ಷಮೆಯಾಚಿಸಲು ಸಿದ್ಧರಿದ್ದಾರೆ. ಆದರೆ ಕೋರ್ಟ್ ನೊಂದಣಾಧಿಕಾರಿ ಅವರ ಅರ್ಜಿಯನ್ನು ಸ್ವೀಕರಿಸಲಿಲ್ಲವೆಂದು ಅವರ ಪರ ವಕೀಲ ಸುಪ್ರೀಂಕೋರ್ಟ್’ಗೆ ಹೇಳಿದ್ದಾರೆ.

ನ್ಯಾಯಾಂಗ ನಿಂದನೆ ಆರೋಪದಲ್ಲಿ ನ್ಯಾ. ಕರ್ಣನ್ ಗೆ ವಿಧಿಸಿರುವ 6 ತಿಂಗಳು ಜೈಲುಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಅವರ ಪರ ವಕೀಲರು ಸುಪ್ರೀಂಕೋರ್ಟ್’ಗೆ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಸಿದ ನ್ಯಾಯಾಲಯ ನೀವು ಅರ್ಜಿಯನ್ನು ಸಲ್ಲಿಸಿ. ನ್ಯಾಯಾಧೀಶರು ಲಭ್ಯವಿದ್ದಾಗ ವಿಚಾರಣೆ ನಡೆಸುತ್ತೇವೆ ಎಂದಿದೆ.

7 ನ್ಯಾಯಾಧೀಶರ ಪೀಠವು ಮೇ. 09 ರಂದು ನ್ಯಾ. ಕರ್ಣನ್ ಗೆ ಜೈಲುಶಿಕ್ಷೆ ವಿಧಿಸಿದ್ದು,ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪ.ಬಂಗಾಳ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ. ಇದೇ ಮೊದಲ ಬಾರಿಗೆ ಹಾಲಿ ನ್ಯಾಯಾಧೀಶರೊಬ್ಬರಿಗೆ ಜೈಲುಶಿಕ್ಷೆ ವಿಧಿಸಲಾಗಿದೆ. ಸದ್ಯಕ್ಕೆ ಕರ್ಣನ್ ದೇಶಬಿಟ್ಟು ಪಲಾಗೈದಿದ್ದಾರೆ.