ರಿಸರ್ವ್ ಬ್ಯಾಂಕ್ ಹಾಗೂ ಸಿಬಿಐಗಳಂತೆ ಚುನಾವಣಾ ಆಯೋಗವು ಕೂಡಾ ಪ್ರಧಾನಿ ಮೋದಿಯವರ ಮುಂದೆ ಶರಣಾಗಿದೆಯೆಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಫೆ.04): ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಚುನಾವಣಾ ಆಯೋಗವು ಕೂಡಾ ಪ್ರಧಾನಿ ಮೋದಿಯವರ ಮುಂದೆ ಶರಣಾಗಿದೆಯೆಂದು ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಹಾಗೂ ಸಿಬಿಐಗಳಂತೆ ಚುನಾವಣಾ ಆಯೋಗವು ಕೂಡಾ ಪ್ರಧಾನಿ ಮೋದಿಯವರ ಮುಂದೆ ಶರಣಾಗಿದೆಯೆಂದು ಟ್ವೀಟ್ ಮಾಡಿದ್ದಾರೆ.
ನೋಟು ಆಮಾನ್ಯ ಕ್ರಮ ವಿಚಾರವಾಗಿ ಮೋದಿಯವರನ್ನು ಟೀಕಿಸಿರುವ ಕೇಜ್ರಿವಾಲ್, ನೋಟು ನಿಷೇಧದಿಂದ ಕಪ್ಪುಹಣಕ್ಕೆ ಕಡಿವಾಣ ಬೀಳುತ್ತದೆ ಎಂದು ಪ್ರಧಾನಿಯವರು ಹೇಳಿದ್ದರು, ಆದರೆ ಪಂಜಾಬ್ ಹಾಗೂ ಗೋವಾಗಳಲ್ಲಿ ಧಾರಾಳವಾಗಿ ಮತದಾರರಿಗೆ ಹಣ ಹಂಚಲಾಗಿದೆ. ಹಾಗಾದರೆ ನೋಟು ಅಮಾನ್ಯ ಕ್ರಮದ ಪ್ರಯೋಜನವೇನಾಯಿತು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ತನ್ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಕೇಜ್ರಿವಾಲ್, ಗೋವಾ ಹಾಗೂ ಪಂಜಾಬ್’ನಲ್ಲಿ ಇಂದು ಇತಿಹಾಸ ಸೃಷ್ಟಿಯಾಗಲಿದೆಯೆಂದಿದ್ದಾರೆ.
