ಇಂದು ಸಂಜೆ 6 ಗಂಟೆಗೆ ಚಿತ್ರೀಕರಣದ ವೇಳೆ 150 ಕಲಾವಿದರಿದ್ದರು. ಈ ಸಂದರ್ಭದಲ್ಲಿ ಘಟನೆ ಸಂಭವಿಸಿದೆ

ಬೆಂಗಳೂರು(ಜ.9): ರವಿಚಂದ್ರನ್​ ಪುತ್ರ ಮನೋರಂಜನ್​ ನಟಿಸುತ್ತಿರುವ ವಿಐಪಿ ಚಿತ್ರದ ಶುಟಿಂಗ್​ ನಡೆಯುವಾಗ ಕಾಲು ಜಾರಿ ಬಿದ್ದು ಸಹ ಕಲಾವಿದೆ​ ಪದ್ಮಾವತಿ ಎಂಬುವವರು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಆವಲಹಳ್ಳಿಯಲ್ಲಿ ನಡೆದಿದೆ. ಇಂದು ಸಂಜೆ 6 ಗಂಟೆಗೆ ಚಿತ್ರೀಕರಣದ ವೇಳೆ 150 ಕಲಾವಿದರಿದ್ದರು. ಈ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಆದರೆ ಚಿತ್ರೀಕರಣದ ವೇಳೆ ಯಾವುದೇ ದುರಂತ ನಡೆದಿಲ್ಲ ಎಂದು ವಿಐಪಿ ಚಿತ್ರದ ನಿರ್ದೇಶಕ ನಂದಕಿಶೋರ್​ ಸುವರ್ಣನ್ಯೂಸ್​ಗೆ ತಿಳಿಸಿದ್ದಾರೆ.