ಸಂಸತ್ ಚುನಾವಣೆಗೆ 265 ಜನ ಉಗ್ರರ ಸ್ಪರ್ಧೆ

JuD to field Hafiz’s son in July polls, vows to make Pakistan ‘citadel of Islam
Highlights

ಜುಲೈ 25 ರಂದು ನಡೆಯಲಿರುವ ಪಾಕಿಸ್ತಾನ ಸಂಸತ್ ಚುನಾವಣೆಗೆ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ 265 ಜನ ಸ್ಪರ್ಧಿಸಿದ್ದಾರೆ. 

ಲಾಹೋರ್: ಜುಲೈ 25 ರಂದು ನಡೆಯಲಿರುವ ಪಾಕಿಸ್ತಾನ ಸಂಸತ್ ಚುನಾವಣೆಗೆ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ 265 ಜನ ಸ್ಪರ್ಧಿಸಿದ್ದಾರೆ. 

ಇದರಲ್ಲಿ ಸಂಘಟನೆಯ ನಾಯಕ ಹಫೀಜ್ ಸಯೀದ್ ಮತ್ತು ಆತನ ಅಳಿಯ ಕೂಡಾ ಸೇರಿದ್ದಾರೆ. ಸಯೀದ್, ಮಿಲ್ಲಿ ಮುಸ್ಲಿಂ ಲೀಗ್ ಎಂಬ ತನ್ನ ಮುಖವಾಣಿ ಸಂಸ್ಥೆಯನ್ನು ರಾಜಕೀಯ ಪಕ್ಷವಾಗಿ ನೊಂದಾಯಿಸಿ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದ್ದ.

ಆದರೆ ಉಗ್ರ ನಂಟುಹೊಂದಿರುವ ಕಾರಣಕ್ಕೆ ಅದಕ್ಕೆ ಪಕ್ಷದ ಮಾನ್ಯತೆ ನೀಡಲು ಚುನಾವಣಾ ಆಯೋಗ ನಿರಾಕರಿಸಿತ್ತು. ಹೀಗಾಗಿ ಸಯೀದ್ ಎಎಟಿ ಎಂಬ ಪಕ್ಷದ ಮೂಲಕ ಕಣಕ್ಕೆ ಇಳಿದಿದ್ದಾನೆ.

loader