ಉತ್ತರಪ್ರದೇಶ ಮುಖ್ಯಮಂತ್ರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ದೆಹಲಿ ಮೂಲದ ಪತ್ರಕರ್ತ ಹಾಗೂ ಸುದ್ದಿ ಸಂಸ್ಥೆಯ ಮುಖ್ಯಸ್ಥ, ಸಂಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ/ಲಖನೌ,(ಜೂನ್.09): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ದೆಹಲಿ ಮೂಲದ ಪತ್ರಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಅಲ್ಲದೆ ಯೋಗಿ ಅವರ ಮಾನಹಾನಿಯಾಗುವಂಥ ವಿಚಾರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನೋಯ್ಡಾದಲ್ಲಿ ಖಾಸಗಿ ವಾಹಿನಿಯೊಂದರ ಮುಖ್ಯಸ್ಥ ಮತ್ತು ಅದರ ಸಂಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ವಿರುದ್ಧ ಮಾತನಾಡಿದ ಇಬ್ಬರ ಬಂಧನ!
ಮಹಿಳೆಯೋರ್ವಳು ಹಲವು ಮಾಧ್ಯಮಗಳೊಂದಿಗೆ ಮಾತನಾಡುತ್ತ ತಾನು ಯೋಗಿ ಆದಿತ್ಯನಾಥ್ ಅವರಿಗೆ ಮದುವೆ ಪ್ರಪೋಸಲ್ ಕಳಿಸಿದ್ದಾಗಿ ಹೇಳಿದ್ದಾಳೆ. ಇದನ್ನು ಪ್ರಶಾಂತ್ ಕನೋಜಿಯಾ ಎಂಬಾತ ತನ್ನ ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಶಾಂತ್ ವಿರುದ್ಧ ಲಖನೌದ ಪೊಲೀಸ್ ಅಧಿಕಾರಿಯೋರ್ವರು ದೂರು ದಾಖಲಿಸಿದ್ದರು. ಇದು ಮುಖ್ಯಮಂತ್ರಿಗಳ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಅದಾದ ಬಳಿಕ ಪ್ರಶಾಂತ್ನನ್ನು ಆತನ ದೆಹಲಿಯ ಮನೆಯಿಂದಲೇ ಬಂಧಿಸಿ, ಲಖನೌಗೆ ಕರೆದೊಯ್ಯಲಾಗಿದೆ. ಹಾಗೇ ಅದೇ ದಿನ ಸಂಜೆ ಖಾಸಗಿ ವಾಹಿನಿಯೊಂದರ ಮುಖ್ಯಸ್ಥ ಮತ್ತು ಸಂಪಾದಕನನ್ನೂ ನೋಯ್ಡಾದಲ್ಲಿ ಬಂಧಿಸಲಾಗಿದೆ.
ಈ ವಾಹಿನಿಯಲ್ಲಿ ಕೂಡ ಅದೇ ವಿಡಿಯೋದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ವಾಹಿನಿ ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿದೆ. ಯೋಗಿ ಆದಿತ್ಯನಾಥ್ ಗೌರವಕ್ಕೆ ಧಕ್ಕೆ ತಂದ ಹಾಗೂ ಪರವಾನಗಿ ಇಲ್ಲಿದೆ ಚಾನಲ್ ನಡೆಸುತ್ತಿರುವ ಆರೋಪದ ಆಧಾರದ ಮೇಲೆ ಅವರಿಬ್ಬರನ್ನೂ ಅರೆಸ್ಟ್ ಮಾಡಿದ್ದಾಗಿ ಹಿರಿಯ ಪೊಲೀಸರು ತಿಳಿಸಿದ್ದಾರೆ.
