ಗೌರಿ ಲಂಕೇಶ್ ಅವರ ಹತ್ಯೆ ನಡೆದು 2 ದಿನವೂ ಕಳೆದಿಲ್ಲ ಆಗಲೇ ಮತ್ತೊಬ್ಬ ಪತ್ರಕರ್ತನ ಮೇಲೆ ದಾಳಿಯಾಗಿರುವುದಕ್ಕೆ ಪತ್ರಿಕಾ ಲೋಕ ದಿಗ್ಭ್ರಮೆ ವ್ಯಕ್ತಪಡಿಸಿದೆ.

ಪಾಟ್ನ(ಸೆ.07): ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದು 2 ದಿನವೂ ಕಳೆದಿಲ್ಲ ಆಗಲೇ ಮತ್ತೊಬ್ಬ ಪತ್ರಕರ್ತನ ಮೇಲೆ ಗುಂಡಿನ ದಾಳಿಯಾಗಿದೆ.

ಬಿಹಾರದ ಆರ್ವಾಲ್ ಜಿಲ್ಲೆಯಲ್ಲಿಹಿಂದಿ ಪತ್ರಿಕೆ ರಾಷ್ಟ್ರೀಯ ಸಹರಾ'ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಂಕಜ್ ಮಿಶ್ರಾ ಎಂಬುವವರ ಮೇಲೆ 2 ಬೈಕಿನಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಮಿಶ್ರಾ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಪಾಟ್ನ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದೆ.

ಗೌರಿ ಲಂಕೇಶ್ ಅವರ ಹತ್ಯೆ ನಡೆದು 2 ದಿನವೂ ಕಳೆದಿಲ್ಲ ಆಗಲೇ ಮತ್ತೊಬ್ಬ ಪತ್ರಕರ್ತನ ಮೇಲೆ ದಾಳಿಯಾಗಿರುವುದಕ್ಕೆ ಪತ್ರಿಕಾ ಲೋಕ ದಿಗ್ಭ್ರಮೆ ವ್ಯಕ್ತಪಡಿಸಿದೆ.