’ಯಕ್ಷಗಾನ ಪಾತ್ರಕ್ಕೆ ಶೋಭಾ ಕರಂದ್ಲಾಜೆ ಕಂಠ ಹೇಳಿ ಮಾಡಿಸಿದಂಗಿದೆ’

First Published 27, Mar 2018, 1:30 PM IST
Journalist Ask a Question to Shobha Karandlaje
Highlights

ಮೈಸೂರು ಸಂಸದ ಪ್ರತಾಪ್ ಸಿಂಹ ಮಗಳು ವಿಪಂಚಿಗೆ ಮೋದಿ  ಮಾಮಾ ಎಂದರೆ ಬಹಳ ಇಷ್ಟವಂತೆ. ಇತ್ತೀಚೆಗೆ ಮೈಸೂರಿಗೆ ಬಂದಾಗ ಮೋದಿ ಅವರು ಪುಟಾಣಿ ವಿಪಂಚಿಯನ್ನು ಹತ್ತಿರ ಕರೆದು ಚಾಕೊಲೇಟ್ ಕೊಟ್ಟಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. 

ಬೆಂಗಳೂರು (ಮಾ. 27):  ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಸಾರ್ವಜನಿಕ ಸಭೆಯ ಭಾಷಣ ಮತ್ತು ಮೀಡಿಯಾ ಬೈಟ್ ನಡುವೆ ವ್ಯತ್ಯಾಸ ಏನಿರುವುದಿಲ್ಲ.  ಮೊನ್ನೆ ಸಂಸತ್ ಭವನದ ಹೊರಗೆ ಬೈಟ್ ಕೊಡುವಾಗ ಗಟ್ಟಿಯಾಗಿ
ಕೂಗುತ್ತ ಹೇಳಿಕೆ ಕೊಡುತ್ತಿದ್ದ ಶೋಭಾರಿಗೆ ಪತ್ರಕರ್ತರು, ‘ಮೇಡಂ ಚುನಾವಣೆ ಸಭೆಗಳಿವೆ, ಅಲ್ಲಿ ಎನರ್ಜಿ ಬೇಕು, ಎಲ್ಲವನ್ನೂ ಇಲ್ಲೇ ಖರ್ಚು ಮಾಡಬೇಡಿ’ ಎಂದು ಹೇಳಿದರು.

ದಕ್ಷಿಣ ಕನ್ನಡದ ಒಬ್ಬ ಪತ್ರಕರ್ತರು ‘ಮೇಡಂ ನೀವು ಯಕ್ಷಗಾನ ಪಾತ್ರ ಮಾಡಬೇಕು. ನಿಮ್ಮ ಕಂಠ ಹೇಳಿಮಾಡಿಸಿದ ಹಾಗೆ ಇದೆ’ ಎನ್ನಬೇಕೆ! ಪತ್ರಕರ್ತರ  ಸಲಹೆ ಕೇಳಿದ ಶೋಭಾ, ಹೌದು ಹೀಗೆ ಗಟ್ಟಿಯಾಗಿ ಕೂಗಿ ಕೂಗಿ ಗಂಟಲು ಆಗಾಗ ಕೈ ಕೊಡುತ್ತದೆ ಎಂದು ಒಪ್ಪಿಕೊಂಡರು. ಆದರೆ ಅಭ್ಯಾಸ ಬದಲಿಸುವುದು ಅಷ್ಟು ಸುಲಭ ಅಲ್ಲ ನೋಡಿ. 

ರಾಜಕೀಯ ಸುದ್ದಿಗಳಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

loader