ರ್‌ಜೆಡಿ ನಾಯಕ ಲಾಲು ಮಾತಿಗಿಳಿದರೆ ಅಲ್ಲಿಯ ನಗೆಯ ಬುಗ್ಗೆ ಖಚಿತ. ಆದರೆ ಅವರ ಈ ಮಾತಿನ ಲಾಸ್ಯ ಜೈಲಲ್ಲೂ ಮುಂದುವರೆದಿದೆ. ವಿಶೇಷವೆಂದರೆ ಅವರ ಈ ಹಾಸ್ಯದ ಮಾತಿಗೆ ಇದೀಗ, ಮೇವು ಹಗರಣದ ತೀರ್ಪು ನೀಡಿದ ನ್ಯಾಯಮೂರ್ತಿಗಳೂ ಸಾಥ್ ನೀಡಿದ್ದಾರೆ.

ರಾಂಚಿ: ಆರ್‌ಜೆಡಿ ನಾಯಕ ಲಾಲು ಮಾತಿಗಿಳಿದರೆ ಅಲ್ಲಿಯ ನಗೆಯ ಬುಗ್ಗೆ ಖಚಿತ. ಆದರೆ ಅವರ ಈ ಮಾತಿನ ಲಾಸ್ಯ ಜೈಲಲ್ಲೂ ಮುಂದುವರೆದಿದೆ. ವಿಶೇಷವೆಂದರೆ ಅವರ ಈ ಹಾಸ್ಯದ ಮಾತಿಗೆ ಇದೀಗ, ಮೇವು ಹಗರಣದ ತೀರ್ಪು ನೀಡಿದ ನ್ಯಾಯಮೂರ್ತಿಗಳೂ ಸಾಥ್ ನೀಡಿದ್ದಾರೆ. ಮೇವು ಹಗರಣದ ಶಿಕ್ಷೆ ಪ್ರಮಾಣಕ್ಕೆ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಲಾಲು ಹಾಜರಾಗಿದ್ದರು. ಈ ವೇಳೆ ಜಡ್ಜ್‌ಗೆ ಲಾಲು ಮಾಡಿದ ಮನವಿ ಮತ್ತು ಅದಕ್ಕೆ ನ್ಯಾ. ಶಿವಪಾಲ್ ಸಿಂಗ್ ನೀಡಿದ ಉತ್ತರಗಳು ನಗೆ ಬುಗ್ಗೆಗೆ ಕಾರಣವಾಗಿದೆ.

ಲಾಲು: ನನಗೆ ಜೈಲಿನಲ್ಲಿ ತುಂಬಾ ಚಳಿಯಾಗುತ್ತಿದೆ. ಏನಾದರೂ ವ್ಯವಸ್ಥೆ ಮಾಡಿ.

ಜಡ್ಜ್: ನಿಮಗೆ ಚಳಿಯಾದರೆ ಹಾರ್ಮೊನಿಯಂ ಮತ್ತು ತಬಲಾ ಬಾರಿಸಿ ಬೆಚ್ಚಿಗಿರಿ.

ಲಾಲು: ಹಿಜಡಾ ಕೈದಿಯೊಬ್ಬ ಇತರ ಕೈದಿಗಳಿಗೆ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದಾನೆ.

ಜಡ್ಜ್: ಈಗ ನೀವಿದ್ದೀರಲ್ಲ. ಎಲ್ಲವೂ ಬಗೆಹರಿಯುತ್ತೆ.

ಲಾಲು: ನನಗೆ ವಯಸ್ಸಾಗಿದೆ. ಅನಾರೋಗ್ಯ ಕಾಡುತ್ತಿದೆ. ಇದನ್ನೆಲ್ಲಾ ಪರಿಗಣಿಸಿ ಶಾಂತಿಯಿಂದ ಶಿಕ್ಷೆ ಪ್ರಮಾಣ ನಿಗದಿ ಮಾಡಿ.

ಜಡ್ಜ್: ನಿಮ್ಮ ಹಿತೈಷಿಗಳಿಂದಲೂ ನನಗೆ ಕರೆಗಳು ಬಂದಿವೆ. ಚಿಂತೆ ಮಾಡಬೇಡಿ ನಾನು ಕಾನೂನನ್ನು ಮಾತ್ರ ಪಾಲಿಸುತ್ತೇನೆ.