ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಅವರು ರೈತರಿಗೆ ಸಂಘವನ್ನು ಸೇರ್ಪಡೆಗೊಳ್ಳಲು ಕರೆ ನೀಡಿದ್ದಾರೆ. ನೀವು ಸಂಘದ ಭಾಗವಾದಲ್ಲಿ ಸಮಾಜದಲ್ಲಿ ಇರುವ ತಾರತಮ್ಯವನ್ನು ನಿವಾರಿಸಲು ಸಹಕಾರಿಯಾಗುವುದು ಎಂದು ಹೇಳಿದ್ದಾರೆ.

ಮುಜಾಫರ್ ನಗರ : ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಅವರು ರೈತರಿಗೆ ಸಂಘವನ್ನು ಸೇರ್ಪಡೆಗೊಳ್ಳಲು ಕರೆ ನೀಡಿದ್ದಾರೆ. ನೀವು ಸಂಘದ ಭಾಗವಾದಲ್ಲಿ ಸಮಾಜದಲ್ಲಿ ಇರುವ ತಾರತಮ್ಯವನ್ನು ನಿವಾರಿಸಲು ಸಹಕಾರಿಯಾಗುವುದು ಎಂದು ಹೇಳಿದ್ದಾರೆ. ಮುಜಾಫರ್ ನಗರದಲ್ಲಿ ನಡೆದ ಕ್ಯಾಂಪ್’ನಲ್ಲಿ ಈ ಹೇಳಿಕೆ ನೀಡಿದ್ದು, ಹಳ್ಳಿಗಳಲ್ಲಿ ಆರೆಸ್ಸೆಸ್ ಸ್ವಯಂ ಸೇವಕರ ಕಾರ್ಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. 

ಹಳ್ಳಿಯಲ್ಲಿ ವಾಸಿಸುವವರ ಸಮಸ್ಯೆಯನ್ನು ಹಳ್ಳಿಯಲ್ಲಿ ವಾಸಿಸುವವರಿಂದ ಮಾತ್ರ ನಿವಾರಣೆ ಮಾಡಲು ಸಾಧ್ಯ, ಆರೆಸ್ಸೆಸ್ ಸದಾ ಗ್ರಾಮೀಣ ಭಾರತದೊಂದಿಗೆ ಸಂಪರ್ಕದಲ್ಲಿದೆ ಎಂದು ಆರೆಸ್ಸೆಸ್ ಸರ ಸಂಘಚಾಲಕರಾದ ಮೋಹನ್ ಭಾಗ್ವತ್ ಹೇಳಿದ್ದಾರೆ.

ಆರೆಸ್ಸೆಸ್’ನ ಸಾವಿರಾರು ಬ್ರಾಂಚ್’ಗಳು ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ನಮ್ಮ ಕಾರ್ಯಕರ್ತರು ಸಾಕಷ್ಟು ಕೊಡುಗೆಯನ್ನು ನೀಡುತ್ತಿದ್ದಾರೆ ಎಂದಿದ್ದಾರೆ. ಇನ್ನು ಇದೇ ವೇಳೆ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ.