ಬೆಂಗಳೂರು (ಜ.29): ಇಲ್ಲಿ ಸೇರಿದವರೆಲ್ಲ ಗೌರಿ ಪರಿವಾರದವರು, ಇಲ್ಲಿ ಯಾರೂ ಸಂಘ ಪರಿವಾರದವರಿಲ್ಲ, ಈ ದೇಶದಲ್ಲಿ ಅಮ್ಮನ ಕಾರ್ಡ್ ಅನ್ನು ಮೋದಿ ಮಾತ್ರ ಯೂಸ್ ಮಾಡ್ತಾರೆ, ಅಮ್ಮನನ್ನು ಎಟಿಎಂ ಮುಂದೆ ನಿಲ್ಲಿಸ್ತಾರೆ  ಎಂದು ಗೌರಿ ದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.

ಅವರ ಪ್ರಕಾರ ನಮಗೆ ಅಮ್ಮ ಮಕ್ಕಳ ಸಂಬಂಧ ಇಲ್ಲ. ಗೌರಿ ಪರಿವಾರ, ಸಂಘ ಪರಿವಾರಕ್ಕೆ ಹೊಡೆತ ಕೊಟ್ಟೆ ಕೊಡುತ್ತದೆ.  ಎಲ್ಲ ಮುಸ್ಲಿಂರನ್ನು ಕೊಂದು ಹಾಕಿಬಿಡಿ. ಹಂಗಾದರೆ ನಿಮ್ಮ ಸಮಸ್ಯೆ ಮುಕ್ತಾಯವಾಗತ್ತಾ? ಎಂದು ಕನ್ಹಯ್ಯಾ ಬಲಪಂಥೀಯರನ್ನು ಪ್ರಶ್ನಿಸಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಒಂದು ಊರಿನಲ್ಲಿ ಹೆಣ ಬಿದ್ದರೆ ಇಡೀ ಊರು ಊಟ ಮಾಡುವುದಿಲ್ಲ ಆದರೆ ನೀವು ಹೆಣದ ಮೇಲೆ ಟ್ವೀಟ್ ಮಾಡುತ್ತೀರಿ.  ಮೋದಿ ಯಾವ ನೈತಿಕತೆ ಬಗ್ಗೆ ನಮಗೆ ಹೇಳ್ತಾರೆ? ನಮಗೆ‌ ಮೋದಿಯ ರಾಜಕೀಯ ಬೇಕಾಗಿಲ್ಲ. ನಮ್ಮ ಗೌರಿ ಪರಿವಾರದಿಂದ ಸಂಘ ಪರಿವಾರ ತುಂಡು ತುಂಡಾಗುತ್ತದೆ. ನೀವು ದೇಶದ ಬಗ್ಗೆ ಎಷ್ಟೇ ಚಿಂತನೆ ಮಾಡಿದರೂ ಕೂಡ ದೇಶದ ಒಂದೇ ಒಂದು ಹಸುವನ್ನೂ ಕೂಡ ಅಲ್ಲಿಂದ ಇಲ್ಲಿಗೆ ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ  ಎಂದು ಕನ್ಹಯ್ಯಾ ಕುಮಾರ್ ವೇದಿಕೆಯಲ್ಲಿ ಮೋದಿಯನ್ನು ಟೀಕಿಸಿದ್ದಾರೆ.