ಪಟನಾ: ಜೆಡಿಯು- ಬಿಜೆಪಿ ಮಿತ್ರಕೂಟ ಎದುರಿಸಲು ಬಿಹಾರದಲ್ಲಿ ಆರ್‌ಜೆಡಿ- ಕಾಂಗ್ರೆಸ್ ಮಾಡಿಕೊಂಡ ‘ಮಹಾಗಠ ಬಂಧನ’ ವನ್ನು ಮಾಜಿ ಸಿಎಂ ಜೀತನ್ ರಾಂ ಮಾಂಝಿ ಅವರ ಪಕ್ಷ ತೊರೆಯುವ ಸಾಧ್ಯತೆ ಇದೆ. 

ಲೋಕ ಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಕ್ಕೆ ಆರ್‌ಜೆಡಿ- ಕಾಂಗ್ರೆಸ್ ಬಳಿಕ ಮಾಂಝಿ ನೇತೃತ್ವದ  ಹಿಂದುಸ್ತಾನ್ ಅವಾಮ್ ಮೋರ್ಚಾ ಬೇಡಿಕೆ ಇಟ್ಟಿದೆ. ಇದು ಈಡೇರದಿದ್ದಲ್ಲಿ ಅವರು ಮೈತ್ರಿ ತೊರೆದು, ಎನ್‌ಡಿಎಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಇದಕ್ಕೆ ಇಂಬು ನೀಡುವಂತೆ ಮಾಂಝಿ ಎನ್‌ಡಿಎಗೆ ಬಂದರೆ, ಸೀಟು ಹಂಚಿಕೆ ಸೂತ್ರವನ್ನು ಮರುವಿನ್ಯಾಸ ಗೊಳಿಸಿ, ಅವರ ಪಕ್ಷಕ್ಕೂ ಅವಕಾಶ ನೀಡ ಲಾಗುವುದು ಎಂದು ಜೆಡಿಯು ರಾಜ್ಯಾಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ತಿಳಿಸಿದ್ದಾರೆ. ಬಿಜೆಪಿ ಕೂಡ ಮಾಂಝಿಗೆ ಸ್ವಾಗತ ಎಂದಿದ್ದಾರೆ.