ಬಿಲೇನಿಯರ್’ಗಳಲ್ಲಿ ಭಾರತಕ್ಕೆ 3 ನೇ ಸ್ಥಾನ; ಮೊದಲ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ ಅಮೆಜಾನ್ ಸಿಇಓ

First Published 7, Mar 2018, 4:44 PM IST
Jeff Bezos richest  first 100 billion mogul  India third in number of billionaires  Forbes
Highlights

ಫೋರ್ಬ್ಸ್ ಮ್ಯಾಗಜಿನ್ ನೀಡುವ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆಜಾನ್ ಸಿಇಒ ಜೆಫ್ ಬೆಸೋಸ್ ಮೊದಲ ಸ್ಥಾನ ಪಡೆದಿದ್ದಾರೆ. 

ಸ್ಯಾನ್ ಫ್ರಾನ್ಸಿಸ್ಕೋ (ಮಾ,07): ಫೋರ್ಬ್ಸ್ ಮ್ಯಾಗಜಿನ್ ನೀಡುವ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಮೆಜಾನ್ ಸಿಇಒ ಜೆಫ್ ಬೆಸೋಸ್ ಮೊದಲ ಸ್ಥಾನ ಪಡೆದಿದ್ದಾರೆ. 

ಫೋರ್ಬ್ಸ್ ಮ್ಯಾಗಜಿನ್ ನಿನ್ನೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಜೆಫ್ ಬೆಸೋಸ್ ಹೆಸರು ಪ್ರಕಟಿಸಿದೆ.  ಈ ಪಟ್ಟಿಯ ಪ್ರಕಾರ ಭಾರತ 119 ಬಿಲೇನಿಯರ್’ಗಳನ್ನು ಹೊಂದಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 18 ಮಂದಿ ಜಾಸ್ತಿಯಾಗಿದ್ದಾರೆ. ಉದ್ಯಮಿ ಮುಕೇಶ್ ಅಂಬಾನಿ ಭಾರತದ ಅತೀ ದೊಡ್ಡ ಶ್ರೀಮಂತನಾಗಿಯೇ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.  

loader