ಕ್ಯಾಲಿಫೋರ್ನಿಯಾ(ಜು.27): ವಿಶ್ವ ಶ್ರೀಮಂತರಲ್ಲಿ ಈಗ ಸ್ಪರ್ಧೆ ಶುರುವಾಗಿದೆ. ಜಗತ್ತಿನ ನಂ 1 ಶ್ರೀಮಂತನಾದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್'ಗೇಟ್ಸ್'ಅನ್ನು ಮೀರಿಸಿದ ಮತ್ತೊಬ್ಬ ಶ್ರೀಮಂತ ಮೊದಲ ಸ್ಥಾನವನ್ನು ಅಲಂಕರಿಸಿದ್ದಾನೆ.

ಆತ ಮತ್ತಿನ್ಯಾರು ಅಲ್ಲ ಜಗತ್ತಿನ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೇಜಾನ್'ನ್ ಸಂಸ್ಥಾಪಕ ಜೆಫ್ ಬೆಜೊಸ್ ಬಿಲ್'ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಂ 1 ಶ್ರೀಮಂತನಾಗಿದ್ದಾನೆ. ಈತನ ಒಟ್ಟು ಆಸ್ತಿ 91.4 ಬಿಲಿಯನ್ ಡಾಲರ್(ಭಾರತೀಯ ರೂ.ಗಳಲ್ಲಿ 6,16,400 ಕೋಟಿ ರೂ.) ಎಂದು ಫೋರ್ಬ್ಸ್ ಪಟ್ಟಿ ಪ್ರಕಟಿಸಿದೆ.

53 ವರ್ಷದ ಜೆಫ್ ಬೆಜೊಸ್ ಅಮೆಜಾನ್ ಕಂಪನಿಯಲ್ಲಿ ಶೇ.17 ಷೇರು ಹೊಂದಿದ್ದಾನೆ. ವಿಶ್ವದಲ್ಲಿಯೇ ಅಮೇಜಾನ್ ಸಂಸ್ಥೆ 500(33,50,000 ಕೋಟಿ ರೂ.) ಬಿಲಿಯನ್ ಡಾಲರ್ ಸ್ವತ್ತು ಹೊಂದಿದೆ. ಬಿಲ್ ಗೇಟ್ಸ್ ಆಸ್ತಿ 86 ಬಿಲಿಯನ್ ಡಾಲರ್ (5,76,200 ಕೋಟಿ ರೂ) 5ನೇ ಸ್ಥಾನದಲ್ಲಿರುವ ಫೇಸ್'ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಕ್ ಆಸ್ತಿ 3,75,200 ಸಾವಿರ ಕೋಟಿ ರೂ.ಇದೆ. ವಿಶ್ವದ 10 ಶ್ರೀಮಂತರಲ್ಲಿ 8 ಮಂದಿ ಅಮೆರಿಕನ್ನರೆ ಇದ್ದಾರೆ.