ಮುಜುರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಇನ್ಮುಂದೆ ಜೀನ್ಸ್, ಶಾಟ್ಸ್, ಟೀ ಶರ್ಟ್ ಧರಿಸುವುದು ನಿಷೇಧ
ಮುಜುರಾಯಿ ಇಲಾಖೆಯ ವ್ಯಾಪ್ತಿಯ ಅಡಿಯಲ್ಲಿ ಬರುವ ದೇವಾಲಯವನ್ನು ಇನ್ಮುಂದೆ ಜೀನ್ಸ್, ಶಾಟ್ಸ್, ಟೀ ಶರ್ಟ್ ಗಳು ಧರಿಸಿ ಭಕ್ತಾಧಿಗಳು ಪ್ರವೇಶಿಸುವಂತಿಲ್ಲವೆಂದು ಧಾರ್ಮಿಕ ಪರಿಷತ್ ಸೂಕ್ತ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಬೆಂಗಳೂರು(ಸೆ.24): ಮುಜುರಾಯಿ ಇಲಾಖೆಯ ವ್ಯಾಪ್ತಿಯ ಅಡಿಯಲ್ಲಿ ಬರುವ ದೇವಾಲಯವನ್ನು ಇನ್ಮುಂದೆ ಜೀನ್ಸ್, ಶಾಟ್ಸ್, ಟೀ ಶರ್ಟ್ ಗಳು ಧರಿಸಿ ಭಕ್ತಾಧಿಗಳು ಪ್ರವೇಶಿಸುವಂತಿಲ್ಲವೆಂದು ಧಾರ್ಮಿಕ ಪರಿಷತ್ ಸೂಕ್ತ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ದೇವಾಲಯಕ್ಕೆ ಬರುವ ಇಂದಿನ ಯುವ ಜನಾಂಗದವರು ಪಾಶ್ಚಿಮಾತ್ಯ ಶೈಲಿಯ ಬಟ್ಟೆಗಳನ್ನು ಧರಿಸಿ ದೇವಾಲಕ್ಕೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ದೇವಾಲಯಕ್ಕೆ ಆಗಮಿಸುವ ಸಂಪ್ರದಾಯಿಕ ಭಕ್ತರ ಭಾವನೆಗಳಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲು ಮುಂದಾಗುತ್ತಿದೆ ಎಂದು ಹೇಳಿದೆ.
ವಸ್ತ್ರ ಸಂಹಿತೆ ನಿಯಮಗಳ ಪ್ರಕಾರ ದೇವಾಲಯಕ್ಕೆ ಬರುವ ಭಕ್ತರು ಜೀನ್ಸ್, ಶಾಟ್ಸ್, ಅರ್ಧ ಪ್ಯಾಂಟ್ ಮತ್ತು ಟಿ-ಶರ್ಟ್ ಗಳನ್ನು ಧರಿಸಿಬರುವಂತಿಲ್ಲ. ಬದಲಾಗಿ ಮಹಿಳೆಯರು ಸೀರೆ ಹಾಗೂ ಸಲ್ವಾರ್ ಕಮಿಜ್‍ಗಳನ್ನು ಹಾಗೂ ಪುರುಷರ ಪಂಚೆ, ಪ್ಯಾಟ್ ಮತ್ತು ಶರ್ಟ್‍ಗಳನ್ನು ಧರಿಸಿಬರಲು ಅವಕಾಶವನ್ನು ನೀಡಲಾಗಿದೆ.
ಅಕ್ಟೋಬರ್ 3 ರಂದು ನಡೆಯುವ ಪರಿಷತ್‍ನ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿ ರಾಜ್ಯಾದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಅನುಸರಿಸಲು ಸೂಚಿಸಲಾಗುವುದು.