ಅಕ್ಟೋಬರ್ 3ರಂದು ತಾಯಿ ಶೇರ್ ಮಾಡಿರುವ ಈ ವಿಡಿಯೋದಲ್ಲಿ ತನ್ನ ತಂದೆ ತಾಯಿ ಮುತ್ತಿಡುವದನ್ನು ನೋಡುತ್ತಿದ್ದಂತೆ ಅಳಲಾರಂಭಿಸುತ್ತಾಳೆ. ಇದಾದ ಬಳಿಕ ತಂದೆ ತನಗೆ ಮುತ್ತು ನೀಡಲು ಬರುತ್ತಿರುವುದನ್ನು ಕಂಡ ಕೂಡಲೇ ಒಂದೇ ಕ್ಷಣದಲ್ಲಿ ಅಳು ಮಾಯವಾಗಿ ನಗು ಚೆಲ್ಲುತ್ತಾಳೆ. ವಿಡಿಯೋ ನೋಡಿದ ಬಳಿಕವಂತೂ ಈ ಮಗುವಿನ ಮೇಲೆ ಮಮತೆ ಮೂಡುವುದರಲ್ಲಿ ಎರಡು ಮಾತೇ ಇಲ್ಲ.

ವಾಷಿಂಗ್ಟನ್(ಅ.30): ಅಮೆರಿಕಾದ ಮೇರಿಲ್ಯಾಂಡ್''ನ ಪುಟ್ಟ ಮಗುವೊಂದು ವಿಡಿಯೋವೊಂದರಿಂದಾಗಿ ಇತ್ತೀಚೆಗೆ ತುಂಬಾ ಫೇಮಸ್ ಆಗಿದೆ. ವಿಡಿಯೋದಲ್ಲಿ ಮಗುವಿನ ವೀಕ್ನೆಸ್ ಒಂದು ಬಹಿರಂಗಗೊಂಡಿದ್ದು, ಪ್ರೇಕ್ಷಕರೂ ಇದನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಆ ಮಗುವಿನ ವೀಕ್ನೆಸ್ ಏನು? ಇಲ್ಲಿದೆ ವಿವರ

ಯಾವತ್ತೂ ಖುಷಿಯಾಗಿರುವ ಐಲಾ ಹೆಸರಿನ ಈ ಪುಟ್ಟ ಕಂದಮ್ಮನಿಗೆ ಒಂದೇ ಒಂದು ವೀಕ್ನೆಸ್ ಇದೆ. ತನ್ನ ಅಪ್ಪ- ಅಮ್ಮ ಮುತ್ತು ಕೊಡುವುದನ್ನು ನೋಡಿದರೆ ಈ ಮುದ್ದಾದ ಮಗುವಿಗೆ ಅಳು ಬರುತ್ತದೆ. ಸದ್ಯ ಈಕೆಯ ಈ ವೀಕ್ನೆಸ್ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ತನ್ನ ಹೆತ್ತವರು ಪರಸ್ಪರ ಮುತ್ತು ನೀಡುವಾಗ ಈಕೆ ವ್ಯಕ್ತಪಡಿಸುವ ಭಾವನೆ ನೋಡುಗರ ಮನಗೆದ್ದಿದೆ.