Asianet Suvarna News

ಸಚಿವ ಸ್ಥಾನ ಹಂಚಿಕೆ ಬಿಕ್ಕಟ್ಟು: ಮೋದಿ ಸಂಪುಟಕ್ಕೆ ಸೇರಲು ಮೈತ್ರಿ ಪಕ್ಷ ನಕಾರ!

ಸಚಿವ ಸ್ಥಾನ ಹಂಚಿಕೆ ಬಿಕ್ಕಟ್ಟು: ಮೋದಿ ಸಂಪುಟಕ್ಕೆ ಸೇರಲು ಮೈತ್ರಿ ಪಕ್ಷ ಜೆಡಿಯು ನಕಾರ

JDU stays out of Modi cabinet with Nitish refusing token participation
Author
Bangalore, First Published May 31, 2019, 8:09 AM IST
  • Facebook
  • Twitter
  • Whatsapp

ನವದೆಹಲಿ[ಮೇ.31]:ಕೇಂದ್ರದಲ್ಲಿ ಕೇವಲ ಒಂದು ಸ್ಥಾನ ಮತ್ತು ಅಷ್ಟಾಗಿ ಮಹತ್ವವಲ್ಲದ ಖಾತೆ ಆಫರ್‌ ನೀಡಲಾಗಿದೆ ಎಂದು ಆರೋಪಿಸಿ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿ ಜೆಡಿಯು, ಸಂಪುಟದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಗುರುವಾರ ಮಾತನಾಡಿದ ಜೆಡಿಯು ರಾಷ್ಟ್ರೀಯ ವಕ್ತಾರ ಪವನ್‌ ವರ್ಮಾ ಅವರು, ‘ನಾವು ಸರ್ಕಾರದಲ್ಲಿ ಭಾಗಿಯಾಗುತ್ತಿಲ್ಲ. ಇದು ನಮ್ಮ ಪಕ್ಷದ ನಿರ್ಧಾರ’ ಎಂದು ಹೇಳಿದೆ.

ಈ ಬಗ್ಗೆ ಇದುವರೆಗೂ ಬಿಜೆಪಿ ಪ್ರತಿಕ್ರಿಯೆ ನೀಡಿಲ್ಲ. 2017ರಲ್ಲಿ ಬಿಹಾರದಲ್ಲಿ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಸಖ್ಯ ತೊರೆದಿದ್ದ ಜೆಡಿಯು ಮತ್ತೆ ಎನ್‌ಡಿಎ ತೆಕ್ಕೆಗೆ ಮರಳಿತ್ತು. ಈ ಬಾರಿ ರಾಜ್ಯದ 40 ಸ್ಥಾನಗಳ ಪೈಕಿ ತಲಾ 17 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಯು ಸ್ಪರ್ಧಿಸಿದ್ದವು. 3 ಸ್ಥಾನಗಳನ್ನು ಮೈತ್ರಿಕೂಟದ ಇತರೆ ಪಕ್ಷಗಳಿಗೆ ನೀಡಲಾಗಿತ್ತು. ಈ ಪೈಕಿ ಎನ್‌ಡಿಎ ಮೈತ್ರಿಕೂಟ 39 ಸ್ಥಾನ ಗೆದ್ದಿತ್ತು.

Follow Us:
Download App:
  • android
  • ios