ಹಾಸನ, (ಆ.24): ಅನರ್ಹ ಶಾಸಕರಾಗಲು ಯಾರು ಕಾರಣ? ಬಿಜೆಪಿಯವರು ರಾಜೀನಾಮೆ ಕೊಡಿಸಿದ್ದಾರೆ ಅವರೇ ಕಾಪಾಡಬೇಕು. ಉಪಚುನಾಣೆಯಲ್ಲಿ ಹೋರಾಟ ಮಾಡುತ್ತೇನೆ.  ಕಳೆದ ಚುನಾವಣೆಯಲ್ಲಿ ಆರ್ಥಿಕ ಪೆಟ್ಟು ಬಿದ್ದಿದ್ದು, ಮುಂದಿನ ಚುನಾವಣೆಯಲ್ಲಿ ಜನರು ಸಹಕಾರ ಮಾಡುತ್ತಾರೆ ಎಂದು ಹೇಳಿದರು.

ಇಂದು (ಶನಿವಾರ) ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡ್ರು, ನಿಖಿಲ್ ಕುಮಾರ್ ಸೋತಿದ್ದಾರೆ. ನಾನು ಸೋತಿದ್ದೇನೆ. ಆದರೆ ಕುಳಿತಿದ್ದೇವಾ? ಅಧಿಕಾರದ ಕಡೆ ಹೋಗಿದ್ದೇವಾ? ಜನರ ಬಳಿಯೇ ಇದ್ದೇವೆ ಎಂದರು.

ಸರ್ಕಾರ ಬೀಳಿಸುವಲ್ಲಿ ಸ್ಪೀಕರ್ ಪಾತ್ರ? Exclusive ಸಂದರ್ಶನದಲ್ಲಿ ದೇವೇಗೌಡ್ರಿಂದ ಸ್ಫೋಟಕ ಮಾಹಿತಿ

ಸಿದ್ದರಾಮಯ್ಯ ಹೇಳಿಕೆಗೆ ಇವತ್ತು ಪ್ರತಿಕ್ರಿಯೆ ನೀಡಲ್ಲ. ಇನ್ನೂ ನೆನಪಿನ ಶಕ್ತಿ ಇದೆ, ನೋಡೋಣ ಜನರ ಮುಂದೆ ಹೋಗೋಣ. ಸಿದ್ದರಾಮಯ್ಯ ಹೇಳಿಕೆಯನ್ನು ಜನತೆ ನಂಬಬೇಕಲ್ಲ. ಎಲ್ಲವನ್ನು ಸಮಯ ಬಂದಾಗ ಹೇಳುವೆ. ದೇವೇಗೌಡರನ್ನು ಮುಗಿಸಲು ಬಂದವರೆಲ್ಲಾ ಮುಗಿದು ಹೋಗಿದ್ದಾರೆ ನಾನು ದೇವರ ನಂಬಿದ್ದೇನೆ ಆದ್ದರಿಂದಲೇ ಹೋರಾಟ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಪಕ್ಷ ಕಟ್ಟಿ ನಡೆಸುತ್ತೇನೆ ಆ ಶಕ್ತಿ ನನಗಿದೆ. ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹೊಸ ಜವಬ್ದಾರಿ ತೆಗೆದುಕೊಂಡಿದ್ದು,  ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗೋಣ ಅಂದಿದ್ದಾರೆ ಎಂದು ಹೇಳುವ ಮೂಲಕ ಮತ್ತೆ ಮೆತ್ರಿ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದರು.