ದೇವೇಗೌಡರಿಗೆ ಹುಟ್ಟುಹಬ್ಬದ ಸಂಭ್ರಮ; ಅಪ್ಪಾಜಿ ಕ್ಯಾಂಟೀನ್ ನಲ್ಲಿ ಆಫರ್

ಬೆಂಗಳೂರು (ಮೇ. 18): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 86 ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ ದೇವೇಗೌಡರು. 

ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಭರ್ಜರಿ ಆಫರ್ ನೀಡಲಾಗಿದೆ. ಹುಟ್ಟುಹಬ್ಬದ ಹಿನ್ನಲೆಯಲ್ಲಿ ಒಂದು ದಿನ ಆಫರ್ ನೀಡಲಾಗಿದೆ.  1 ರೂಗೆ ಕಾಫಿ, ಟೀ, ತಟ್ಟೆ ಇಡ್ಲಿ, ವಡೆ, ಕೇಸರಿ ಬಾತ್, ಖಾರಾ ಬಾತ್ ನೀಡಲಾಗುತ್ತದೆ. ಮಧ್ಯಾಹ್ನ ಮುದ್ದೆ ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್ ನೀಡಲಾಗುತ್ತದೆ.  ಆಫರ್‌ಗಾಗಿ ಕ್ಯೂ ನಿಂತು ಜನರು ಊಟ ಸವಿದಿದ್ದಾರೆ. 

ಬೇರೆ ದಿನದಲ್ಲಿ ಕಾಫಿ, ಟಿ 3 ರೂ, ತಟ್ಟೆ ಇಡ್ಲಿ, ವಡೆ, ಕೇಸರಿ ಬಾತ್, ಖಾರಾ ಬಾತ್ 5 ರೂ, ಮುದ್ದೆ ಬಸ್ಸಾರು, ಅನ್ನ ಸಾಂಬಾರ್, ರೈಸ್ ಬಾತ್ 10 ರೂ ಕೊಡಬೇಕಾಗುತ್ತದೆ. 
 

Comments 0
Add Comment