ನಮ್ಮ ವಿಚಾರಗಳು ಅವರ ಜೊತೆ ಹೊಂದಾಣಿಕೆ ಆಗುತ್ತಿಲ್ಲ. ಯಾವಾಗ ಸೇರಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ. ರಾಜಕೀಯದಿಂದಾಗಿ ದೇವೇಗೌಡ ಕುಟುಂಬದಿಂದ ದೂರ ಆಗಿದ್ದೇವೆ.ವೈಯಕ್ತಿಕವಾಗಿ ದೇವೇಗೌಡರ ಮೇಲೆ ಅಪಾರ ಗೌರವವಿದೆ'

ಬೆಂಗಳೂರು(ಮಾ.03): ನಾವು ಎಲ್ಲೆ ಹೋದರೂ ನಮಗೆ ಟಿಕೆಟ್ ಸಿಗುವುದು ಗ್ಯಾರಂಟಿ, ಆದರೂ ನಾವು ಕಾಂಗ್ರೆಸ್ ಸೇರುವುದು ಖಚಿತ ಎಂದು ಜೆಡಿಎಸ್ ಬಂಡಾಯ ಶಾಸಕರು ತಿಳಿಸಿದ್ದಾರೆ.

'ಯುಗಾದಿ ಬಳಿಕ ನಮ್ಮ ರಾಜಕೀಯ ನಡೆ ಬದಲಾವಣೆಯಾಗಲಿದೆ. ನೂರಕ್ಕೆ ನೂರರಷ್ಟು ನಾವು ಜೆಡಿಎಸ್ ಪಕ್ಷದಲ್ಲಿ ಇಲ್ಲ.

ಯುಗಾದಿ ನಂತರ ನಮ್ಮ ಕ್ಷೇತ್ರದ ಜನರ ಜೊತೆ ಸಭೆ ಸೇರಿ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ. ನಮ್ಮ ವಿಚಾರಗಳು ಅವರ ಜೊತೆ ಹೊಂದಾಣಿಕೆ ಆಗುತ್ತಿಲ್ಲ. ಯಾವಾಗ ಸೇರಬೇಕು ಎಂದು ಇನ್ನೂ ತೀರ್ಮಾನ ಮಾಡಿಲ್ಲ. ರಾಜಕೀಯದಿಂದಾಗಿ ದೇವೇಗೌಡ ಕುಟುಂಬದಿಂದ ದೂರ ಆಗಿದ್ದೇವೆ.ವೈಯಕ್ತಿಕವಾಗಿ ದೇವೇಗೌಡರ ಮೇಲೆ ಅಪಾರ ಗೌರವವಿದೆ' ಎಂದು ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯಸ್ವಾಮಿ ತಿಳಿಸಿದರು.

ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ನಾವು 7 ಮಂದಿ ಕಾಂಗ್ರೆಸ್ ಸೇರುತ್ತೇವೆ. ಕಾಂಗ್ರೆಸ್ ಸೇರ್ಪಡೆಗೆ ದಿಗ್ವಿಜಯ್ ಸಿಂಗ್ ಹಾಗೂ ಸಿಎಂ ಸಿದ್ದರಾಮಯ್ಯ ಕೂಡ ಒಪ್ಪಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಕಾಂಗ್ರೆಸ್ ಸೇರುತ್ತಿದ್ದೇವೆ. ನಮಗೆಲ್ಲ ನಮ್ಮದೇ ಕ್ಷೇತ್ರಗಳಲ್ಲಿ ಟಿಕೆಟ್ ಕೊಡುವ ಭರವಸೆ ಸಿಕ್ಕಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎಂದು ತಿಳಿಸಿದರು.