ಮಗ ಇಕ್ಬಾಲ್ ಅನ್ಸಾರಿ ಚಿತ್ರನಟಿ ಪಂಚಮಿಯನ್ನು ಕದ್ದುಮುಚ್ಚಿ ಮದುವೆಯಾಗಿಲ್ಲ. ಎರಡನೇ ಮದುವೆಯಾಗಿದ್ದು ನಿಜ. ಆದರಲ್ಲಿ ಅದರಲ್ಲಿ ತಪ್ಪೇನು? ಪದ್ಧತಿ ಪ್ರಕಾರವೇ ಅವರು ಪಂಚಮಿಯನ್ನು ವಿವಾಹವಾಗಿದ್ದರು. ಕುಟುಂಬದಲ್ಲಿ ಯಾರಿಗೂ ಯಾವುದೇ ಆಕ್ಷೇಪವಿರಲಿಲ್ಲ. ಇಕ್ಬಾಲ್ ಅವರ ಸ್ವಂತ ದುಡಿಮೆಯಿಂದ ಸಂಪಾದಿಸಿದ್ದ ಬಾರ್'ಗಳನ್ನ ಪಂಚಮಿಗೆ ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನು? ಎಂದು ತಾಯಿ ಅಹ್ಮದಿ ಬೇಗಂ ಪ್ರಶ್ನಿಸುತ್ತಾರೆ.

ಕೊಪ್ಪಳ(ಜೂನ್ 10): ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ವೈಯಕ್ತಿಕ ಆಸ್ತಿ ವಂಚನೆಯ ಆರೋಪ ಕೇಳಿಬಂದಿದೆ. ಎರಡನೇ ಪತ್ನಿಗಾಗಿ ತಮಗೆ ಮೋಸ ಮಾಡಿದ್ದಾರೆ ಅಂತ ಇಕ್ಬಾಲ್ ಅನ್ಸಾರಿ ಸಹೋದರ ಅಜರ್ ಅನ್ಸಾರಿ ಆರೋಪಿಸಿದ್ದಾರೆ. ಚಿತ್ರನಟಿ ಪಂಚಮಿಯನ್ನು 2ನೇ ಮದುವೆಯಾಗಿರುವ ಇಕ್ಬಾಲ್ ಅನ್ಸಾರಿ, ತಮಗೆ ಸೇರಬೇಕಿದ್ದ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದುಕೊಟ್ಟಿದ್ದಾರೆ ಅಂತ ಆರೋಪಿಸಲಾಗಿದೆ. 

2005ರಲ್ಲಿ ಇಕ್ಬಾಲ್ ಅನ್ಸಾರಿ ಅವರು ಪಂಚಮಿಯನ್ನು ವಿವಾಹವಾಗಿದ್ದು 2016 ರಲ್ಲಿ ಬಾರ್'ಗಳನ್ನ ಆಕೆಯ ಹೆಸರಿಗೆ ಬರೆದಿದ್ದಾರೆ. ಈ ಮೂಲಕ ತಮಗೆ ಮೋಸ ಮಾಡಿದ್ದಾರೆ ಎಂದು ಇಕ್ಬಾಲ್ ಅವರ ಸಹೋದರರಾದ ಅಜರ್ ಅನ್ಸಾರಿ ಹಾಗೂ ಅಹ್ಮದ್ ಅನ್ಸಾರಿ ದೂರಿದ್ದಾರೆ.

ಇಕ್ಬಾಲ್'ಗೆ ತಾಯಿ ಬೆಂಬಲ:
ತಮ್ಮ ಪುತ್ರ ಇಕ್ಬಾಲ್ ಅನ್ಸಾರಿ ವಿರುದ್ಧ ಕೇಳಿಬಂದಿರುವ ಆರೋಪವನ್ನು ಅವರ ತಾಯಿ ಅಹ್ಮದಿ ಬೇಗಂ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಆರೋಪ ಮಾಡಿರುವ ತಮ್ಮಿಬ್ಬರು ಮಕ್ಕಳು ಅನೇಕ ದುಷ್ಚಟಗಳಿಂದ ಆಸ್ತಿ ಕಳೆದುಕೊಂಡು ಈಗ ಹತಾಶರಾಗಿ ದೂರುತ್ತಿದ್ದಾರೆ. ತಂದೆಯ ಕಾಲದಲ್ಲೇ ಮೂರೂ ಸೋದರರಿಗೂ ಆಸ್ತಿಯ ಹಂಚಿಕೆಯಾಗಿತ್ತು ಎಂದು ಬೇಗಂ ಸ್ಪಷ್ಟಪಡಿಸಿದ್ದಾರೆ.

ಮಗ ಇಕ್ಬಾಲ್ ಅನ್ಸಾರಿ ಚಿತ್ರನಟಿ ಪಂಚಮಿಯನ್ನು ಕದ್ದುಮುಚ್ಚಿ ಮದುವೆಯಾಗಿಲ್ಲ. ಎರಡನೇ ಮದುವೆಯಾಗಿದ್ದು ನಿಜ. ಆದರಲ್ಲಿ ಅದರಲ್ಲಿ ತಪ್ಪೇನು? ಪದ್ಧತಿ ಪ್ರಕಾರವೇ ಅವರು ಪಂಚಮಿಯನ್ನು ವಿವಾಹವಾಗಿದ್ದರು. ಕುಟುಂಬದಲ್ಲಿ ಯಾರಿಗೂ ಯಾವುದೇ ಆಕ್ಷೇಪವಿರಲಿಲ್ಲ. ಇಕ್ಬಾಲ್ ಅವರ ಸ್ವಂತ ದುಡಿಮೆಯಿಂದ ಸಂಪಾದಿಸಿದ್ದ ಬಾರ್'ಗಳನ್ನ ಪಂಚಮಿಗೆ ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನು? ಎಂದು ತಾಯಿ ಅಹ್ಮದಿ ಬೇಗಂ ಪ್ರಶ್ನಿಸುತ್ತಾರೆ.

ಬಿಜೆಪಿ ಲಿಂಕ್..?
ಇಕ್ಬಾಲ್ ಅನ್ಸಾರಿ ವಿರುದ್ಧ ಸೋದರರಿಂದ ಆರೋಪ ಕೇಳಿಬರಲು ಬಿಜೆಪಿಯೇ ಕಾರಣ ಎಂದು ಅಹ್ಮದಿ ಬೇಗಂ ಪ್ರತ್ಯಾರೋಪಿಸಿದ್ದಾರೆ. ತಮ್ಮಿಬ್ಬರು ಮಕ್ಕಳು ಅಜರ್ ಮತ್ತು ಅಮ್ಜದ್ ಅನ್ಸಾರಿ ಅವರು ಭಾರತೀಯ ಜನತಾ ಪಕ್ಷದ ಜೊತೆ ಶಾಮೀಲಾಗಿದ್ದು ಈ ಕಾರಣದಿಂದ ಸೋದರನ ಮೇಲೆಯೇ ದೂರು ಹೇರುತ್ತಿದ್ದಾರೆ ಎಂದು ಅವರ ತಾಯಿ ಹೇಳಿದ್ದಾರೆ.