ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಹಣ ಕೊಟ್ಟು ಮತ ಪಡೆದರೆ ರಾಹುಲ್ ಗಾಂಧಿ?

First Published 22, Mar 2018, 3:22 PM IST
JDS Minister Revanna Slams Rahul Gandhi
Highlights

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ರಾಹುಲ್ ಗಾಂಧಿ ಆರೋಪಕ್ಕೆ  ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ. 

ಹಾಸನ (ಮಾ. 22):  ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ರಾಹುಲ್ ಗಾಂಧಿ ಆರೋಪಕ್ಕೆ  ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ. 

ಉಪಕಾರ ಮಾಡಿದವರನ್ನು ಮರೆಯುವುದು ಕಾಂಗ್ರೆಸ್ ಸಂಸ್ಕೃತಿ.  ಇವರಿಗೆ ಬೆಂಬಲ ನೀಡಿದ ಪಕ್ಷಗಳಿಗೆ ಟೋಪಿ ಹಾಕಿದ್ದಾರೆ. ಇವರಿಗೆ ನಾಚಿಗೆಯಾಗಬೇಕು ಎಂದಿದ್ದಾರೆ. 

ದೇವೇಗೌಡರಿಗೆ ಅಡ್ಜೆಸ್ಟ್’ಮೆಂಟ್ ರಾಜಕೀಯ ಗೊತ್ತಿಲ್ಲ. ಗೊತ್ತಿದ್ದರೆ  ಪ್ರಧಾನಿ ಹುದ್ದೆ ಬಿಟ್ಟು ಬರುತ್ತಿರಲಿಲ್ಲ. ಯುಪಿಎ ಸರಕಾರಕ್ಕೆ ಯಾರು ಸಹಾಯ ಮಾಡಿದ್ರು ಅನ್ನೋದನ್ನು ರಾಹುಲ್ ಗಾಂಧಿ ಅವರ ತಾಯಿ ಬಳಿ ಕೇಳಲಿ.  ಹೊಂದಾಣಿಕೆ ರಾಜಕೀಯ ಮಾಡಿದ್ದು ಅವರು ಎಂದು ಟಾಂಗ್ ನೀಡಿದ್ದಾರೆ. 

ರಾಹುಲ್ ಗಾಂಧಿ ಸಿದ್ಧ ಭಾಷಣ  ಓದುವುದನ್ನು  ನಿಲ್ಲಿಸಲಿ.  ದೇವೇಗೌಡರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.  ರಾಹುಲ್ ಗಾಂಧಿಗೆ ಅನುಭವದ ಕೊರತೆ ಇದೆ.  ಹೀಗಾಗಿ ಅವರ ತಾಯಿಯನ್ನು ಕೇಳಿ ನಂತರ ಮಾತನಾಡಲಿ.  ಇವರಿಂದ ನಾವು ರಾಜಕಾರಣ ಕಲಿಯಬೇಕಾ ಎಂದಿದ್ದಾರೆ. 

ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಹಣಕೊಟ್ಟು ಮತ ಪಡೆದಿಲ್ಲ ಎಂದು ರಾಹುಲ್ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದ್ದಾರೆ. 

loader