ಮಂಡ್ಯ : ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಗೆಲುವು ಸಾಧಿಸುತ್ತಾರೆ ಎಂದು ಮೊದಲೇ ಗೊತ್ತಿತ್ತು ಎಂದು ಜೆಡಿಎಸ್ ಎಂಎಲ್ ಸಿ ಸಂದೇಶ್ ನಾಗರಾಜ್ ಹೇಳಿದ್ದಾರೆ. 

ಆರಂಭದಿಂದಲೂ ಸುಮಲತಾ ಗೆಲ್ಲುತ್ತಾರೆ ಎಂದು ತಿಳಿದಿತ್ತು. ಅದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕಡಿಮೆ ಎಂದರೂ ಒಂದು ಲಕ್ಷ ಮತಗಳಿಂದ ಗೆಲ್ಲುತ್ತಾರೆ ಎಂದು ಹೇಳಿದ್ದೆ. ಅದರಂತೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದರು. 

ಇನ್ನು ನಿಖಿಲ್ ಮಂಡ್ಯದಲ್ಲಿ ಎರಡೂವರೆ ಲಕ್ಷ ಮತಗಳಿಂದ ಸೋತರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಕೆಲವರು ಹೇಳಿದ್ದರು. ಅವರಿಗೆ ಇದನ್ನು ನೆನಪಿಸುತ್ತಿದ್ದೇನೆ. 

ಎರಡೂವರೆ ಲಕ್ಷ ಮತಗಳಿಂದ ಸೋತ್ರೆ ರಾಜಕೀಯ ನಿವೃತ್ತಿ ಅಥವಾ ಸನ್ಯಾಸತ್ವ ತೆಗೆದುಕೊಳ್ಳೋದಾಗಿ ಹೇಳಿದ್ರು. ಅವ್ರಿಗೆ ಇದನ್ನ ನೆನಪಿಸುತ್ತಿದ್ದೇನೆ.  ಮಾತಿನಂತೆ ಅವರು ನಡೆದುಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಮಂತ್ರಿಗಳು ಸುಳ್ಳು ಹೇಳಬಾರದು. ಇದು ರಾಜ್ಯದ ಜನತೆಗೆ ಸುಳ್ಳು ಹೇಳಿದ ಹಾಗೆ ಆಗುತ್ತದೆ. ಅವರು ಮರೆತಿರಬೇಕು. ದಯವಿಟ್ಟು ಅವರ ಮಾತನ್ನ ಅವರಿಗೆ ನೆನಪಿಸಿ ಎಂದು ಪರೋಕ್ಷವಾಗಿ ಸಚಿವ ಪುಟ್ಟರಾಜುಗೆ ಟಾಂಗ್ ನೀಡಿದರು.‌

ಕಾಂಗ್ರೆಸ್ - ಜೆಡಿಎಸ್ ಜೊತೆ ಸೇರಿದಾಗಲೇ ಹೀನಾಯವಾಯಿತು. ಇವತ್ತು ಕಾಂಗ್ರೆಸ್ ಜೊತೆಗಿನ ಸಂಬಂಧ ಬಿಟ್ಟರೆ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಇಲ್ಲವೇ ಇದ್ದ ಒಂದು ಸ್ಥಾನವನ್ನೂ ಕಳೆದುಕೊಳ್ಳುತ್ತಾರೆ ಎಂದರು.