ಮೈಸೂರು[ಸೆ. 20] ಯಡಿಯೂರಪ್ಪ ಅವರ ಅಪ್ಪನ ಮನೆ ದುಡ್ಡಿನಲ್ಲಿ ನೆರೆ ಪರಿಹಾರ ಮಾಡುತ್ತಿಲ್ಲ. ಒಂದೇ ರಾತ್ರಿಯಲ್ಲಿ ಶಿಕಾರಿಪುರಕ್ಕೆ ಒಂದು ಸಾವಿರ ಕೋಟಿ ಕೊಟ್ಟಿದ್ದಾರೆ. ಅದು ಯಡಿಯೂರಪ್ಪ ಸಂಪಾದನೆ ಮಾಡಿದ ದುಡ್ಡ? ಎಂದು  ಪ್ರಶ್ನೆ ಮಾಡಿದರು.

ನಾನು ಪಕ್ಷಾತೀತವಾಗಿ ಎಲ್ಲಾ ಕ್ಷೇತ್ರಕ್ಕೂ ಅನುದಾನ ಕೊಟ್ಟೆ. ಯಡಿಯೂರಪ್ಪ ಹೇಳುವುದು ಒಂದು ಮಾಡುವುದು ಇನ್ನೊಂದು. ಸದನದಲ್ಲಿ ದ್ವೇಷ ರಾಜಕೀಯ ಮಾಡದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯಗೆ ಕೃತಜ್ಞತೆ  ಎಂದು ಹೇಳಿದ್ದರು.  ಆದರೆ 24 ಗಂಟೆಯಲ್ಲಿ ಸಿಬಿಐ ಅಂದ್ರು. ಇವಕ್ಕೆಲ್ಲ ನಾನು ಹೆದರುವುದಿಲ್ಲ, ಸಿಬಿಐ ಇಲ್ಲದಿದ್ರೆ ಅವರ ಅಪ್ಪನನ್ನು ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದರು.

ಬಿಜೆಪಿ ಹೊಗಳುತ್ತ ಬಂದಿರುವ ಜಿಟಿ ದೇವೇಗೌಡರಿಗೂ ಟಾಂಗ್ ನೀಡಿದ ಕುಮಾರಸ್ವಾಮಿ, ಜಿಟಿಡಿ ಹೇಳಿಕೆಯ ತಿರುಗೇಟು ನೀಡಿದ ಮಾಜಿ ಸಿಎಂ  ಈ ಪಕ್ಷ ಉಳಿದು, ಬೆಳೆದುಕೊಂಡಿರುವುದು ಕಾರ್ಯಕರ್ತರಿಂದ. ನಾನೂ ಕೂಡ ಒಬ್ಬ ಕಾರ್ಯಕರ್ತ.

ಯಾರಾದರೂ ನನ್ನಿಂದಲೇ ಬೆಳೆದಿದೆ ಎಂದುಕೊಂಡರೆ ಅದು ಮೊಟ್ಟೆಕೋಳಿ ಕಥೆ ಆಗುತ್ತೆ. ಬಿಜೆಪಿ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಎಂಬುದು ಅನಾಗರಿಕವಾಗಿ ನಡೆಯುತ್ತಿದೆ. ಬಹುಮತದ ಸರ್ಕಾರ ಯೋಜನೆ ರೂಪಿಸಿ ಹಣ ಹಂಚಿಕೆ ಮಾಡಿದ್ದ ಯೋಜನೆಗಳನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.