ನಿಶ್ಚಿತಾರ್ಥದ ಬಳಿಕ ಕಂಡಕಂಡ ಹುಡುಗಿಯರ ಜೊತೆ ಸುತ್ತುತ್ತಿದ್ದ ಮಧು, ಇದನ್ನು ಯುವತಿ ಪ್ರಶ್ನಿಸಿದ್ದಕ್ಕೆ ಮದುವೆ ಬೇಡ ಎಂದಿದ್ದಾನೆ ಎನ್ನುವುದು ಯುವತಿಯ ಕುಟುಂಬದ ಆರೋಪ.

ಬೆಂಗಳೂರು(ಡಿ.04): ನಿಶ್ಚಿತಾರ್ಥವಾದ ಬಳಿಕ ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ಎಲ್. ಶಿವರಾಮೇಗೌಡ ಮಾತು ಕೇಳಿ ವರ ಮದುವೆ ಬೇಡ ಎಂಬ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಿವರಾಮೇಗೌಡ ಅವರ ಸೊಸೆಯ ಸೋದರ ಭದ್ರಾವತಿಯ ಯುವತಿಯ ಜೊತೆ 2016ರರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಎಂಗೇಜ್'ಮೆಂಟ್ ಬಳಿಕ ಬರೋಬ್ಬರಿ 30 ಲಕ್ಷ ಹಣ ಹಾಗೂ ಒಡವೆಯನ್ನೂ ವರನ ಕಡೆಯವರು ಪಡೆದಿದ್ದರು. ಅಲ್ಲದೇ ಹುಡುಗಿಯ ಮನೆಯವರಿಗೆ ಗೊತ್ತಿಲ್ಲದಂತೆ ಯುವತಿಯನ್ನು ಹೆದರಿಸಿ ಅತ್ಯಾಚಾರವನ್ನೂ ಸಹಾ ಮಾಡಿದ್ದಾನೆ. ಅತ್ಯಾಚಾರದ ಅಬ್ಬರಕ್ಕೆ ಗಾಯಗೊಂಡ ಯುವತಿಗೆ ಟ್ರೀಟ್'ಮೆಂಟ್ ಕೂಡಾ ಕೊಡಿಸಿದ್ದಾನೆ ಈ ಪ್ರಕರಣದ ವಿಲನ್ ಹಾಸನದ ಉದಯಗಿರಿ ಬಡಾವಣೆಯ ಮಧು.

ನಿಶ್ಚಿತಾರ್ಥದ ಬಳಿಕ ಕಂಡಕಂಡ ಹುಡುಗಿಯರ ಜೊತೆ ಸುತ್ತುತ್ತಿದ್ದ ಮಧು, ಇದನ್ನು ಯುವತಿ ಪ್ರಶ್ನಿಸಿದ್ದಕ್ಕೆ ಮದುವೆ ಬೇಡ ಎಂದಿದ್ದಾನೆ ಎನ್ನುವುದು ಯುವತಿಯ ಕುಟುಂಬದ ಆರೋಪ.