ಶಾಸಕ ಮುನಿರತ್ನಂ ಬೆಂಬಲಿಗರು ಪಾಲಿಕೆ ಸದಸ್ಯೆ ಮಂಜುಳಾ ಮೇಲೆ ನಡೆಸಿದ್ದರು. ಇದರ ಮುಂದುವರಿದ ಭಾಗವಾಗಿ ಶನಿವಾರ ವಿಧಾನ ಪರಿಷತ್ ಸದಸ್ಯ ಶರವಣ ನೇತೃತ್ವದಲ್ಲಿ ಬಿಬಿಎಂಪಿ ಕಚೇರಿಯಲ್ಲಿ ಜೆಡಿಎಸ್ ಪಾಲಿಕೆ ಸದಸ್ಯ ಸಭೆ ನಡೆಸಿದರು.

ಬೆಂಗಳೂರು(ಮೇ.20): ನಿನ್ನೆ ಲಗ್ಗೆರೆಯಲ್ಲಿ ಪಾಲಿಕೆ ಸದಸ್ಯೆ ಮಂಜುಳಾ ಮೇಲೆ ನಡೆದ ಹಲ್ಲೆಗೆ ಜೆಡಿಎಸ್ ಪಕ್ಷ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಘಟನೆಯಿಂದ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರು ಕಾಂಗ್ರೆಸ್ ಪಕ್ಷದ ಮೇಲೆ ಗರಂ ಆಗಿದ್ದು, ಕಾಂಗ್ರೆಸ್ ಜತೆ ಮೈತ್ರಿ ಕಳೆದುಕೊಳ್ಳುವ ಮಾತನಾಡುತ್ತಿದ್ದಾರೆ. ಶಾಸಕ ಮುನಿರತ್ನಂ ಬೆಂಬಲಿಗರು ಪಾಲಿಕೆ ಸದಸ್ಯೆ ಮಂಜುಳಾ ಮೇಲೆ ನಡೆಸಿದ್ದರು. ಇದರ ಮುಂದುವರಿದ ಭಾಗವಾಗಿ ಶನಿವಾರ ವಿಧಾನ ಪರಿಷತ್ ಸದಸ್ಯ ಶರವಣ ನೇತೃತ್ವದಲ್ಲಿ ಬಿಬಿಎಂಪಿ ಕಚೇರಿಯಲ್ಲಿ ಜೆಡಿಎಸ್ ಪಾಲಿಕೆ ಸದಸ್ಯ ಸಭೆ ನಡೆಸಿದರು.ಈ ಸಭೆಯಲ್ಲಿ ಶಾಸಕ ಮುನಿರತ್ನ ನಡೆಗೆ ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರವಾಗಿ ಶಾಸಕ ಮುನಿರತ್ನಂ ಕ್ಷಮೆ ಕೇಳದಿದ್ದರೆ ಮುಂಬರುವ ದಿನಗಳಲ್ಲಿ ಬಿಬಿಎಂಪಿ ಮೈತ್ರಿ ಕಳೆದುಕೊಳ್ಳುವ ಎಚ್ಚರಿಕೆ ಮಾತನಾಡಿದರು.