Asianet Suvarna News Asianet Suvarna News

ಈ ಕೋತಿಗೆ ಕೋಪ ತರಿಸಿದೆ ಸಂಗಾತಿ ಸಾವು!: ಗ್ರಾಮದಲ್ಲೇ ಜೆಸಿಬಿ ನಿಷೇಧ

JCB are not allowed in this village because of the fear ogf this monkey

ವಿಜಯಪುರ(ಸೆ.30): ವಿಜಯಪುರದ ಒಂದು ಗ್ರಾಮದಲ್ಲಿ ಜೆಸಿಬಿ ಹಾಗೂ ಹಿಟಾಚಿ ಓಡಾಡುವಂತಿಲ್ಲ. ಹಾಗೇನಾದರೂ ಗ್ರಾಮದಲ್ಲಿ ವಾಹನ ಬಂತೆಂದರೆ ಸಾಕು ಗ್ರಾಮಕ್ಕೆ ಗ್ರಾಮವೇ ಅಲ್ಲೋಲಕಲ್ಲೋವಾಗಿ ಬಿಡುತ್ತದೆ. ಹೀಗ್ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ವಿಜಯಪುರ ಜಿಲ್ಲೆ ಶೇಗುಣಸಿ ಎಂಬ ಈ ಗ್ರಾಮದಲ್ಲಿ ಜೆಸಿಬಿ ಹಾಗೂ ಹಿಟಾಚಿ ವಾಹನಗಳಿಗೆ ಸಂಪೂರ್ಣ ನಿಷೇಧವಿದೆ. ಹಾಗೇನಾದರೂ ವಾಹನಗಳು ಬಂದ್ರೆ ಅವುಗಳ ಮೇಲೆ ನಡೆಯುತ್ತೆ ಭಾರಿ ಅಟ್ಯಾಕ್. ಕಾರಣ ಕೇಲವು ತಿಂಗಳುಗಳ ಹಿಂದೆ ತನ್ನ ಸಂಗಾತಿ ಕೋತಿ ಆಕಸ್ಮಿಕವಾಗಿ ನಿಧನ ಹೊಂದಿತ್ತು. ಆಗ ಗ್ರಾಮದ ಜನ ಶ್ರದ್ಧೆ-ಭಕ್ತಿಯಿಂದ ಕೋತಿ ಪಾರ್ಥಿವ ಶರೀರವನ್ನು ಮೆರವಣಿಗೆ ನಡೆಸಿ ಊರ ಹೊರಗೆ ಜೆಸಿಬಿ ಮೂಲಕ ಗುಂಡಿ ತೋಡಿ ಅಂತ್ಯಕ್ರಿಯೆ ಮಾಡಲಾಗಿತ್ತಂತೆ.  ಆಗ ಜನರು ಈ ಗಂಡು ಕೋತಿಗೆ ಸಂಗಾತಿಯ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡದ ಪರಿಣಾಮವಾಗಿ. ಈ ಗಂಡು ಮಂಗ ಜೆಸಿಬಿಗಳನ್ನು ಕಂಡರೆ ಸಾಕು ತಬ್ಬಲಿಯಾಗಿರುವ ಕೋತಿ ಹೆಬ್ಬುಲಿಯಾಗಿ ಜೆಸಿಬಿಗಳ ಮೇಲೆ ಅಟ್ಯಾಕ್ ಮಾಡುತ್ತದೆ.

ಆದ್ರೆ, ಈವರೆಗೂ ಈ ಕೋತಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿಲ್ಲ. ಕೇವಲ ಜೆಸಿಬಿಗಳ ಮೇಲಷ್ಟೇ ತನ್ನ ಆಕ್ರೋಶ ವ್ಯಕ್ತಡಿಸುವುದರ ಮೂಲಕ ಸಂಗಾತಿ ಅಗಲಿಕೆಯ ದುಃಖವನ್ನು ವ್ಯಕ್ತಡಿಸುತ್ತದೆ.

 

 

Follow Us:
Download App:
  • android
  • ios