ಒಟ್ಟು 2 ಪುಟ ಬರೆದಿರುವುದನ್ನು ಎಡಿಎಂಕೆ ಪಕ್ಷದ ಮುಖ್ಯ ಕಚೇರಿಯಲ್ಲಿ ಬಿಡುಗಡೆ ಮಾಡಿ ಈ ವಿಷಯ ತಿಳಿಸಲಾಯಿತು.
ಚೆನ್ನೈ(ನ.13): ಸುಮಾರು 50 ದಿನಗಳ ನಂತರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಪೊಲೊ ಆಸ್ಪತ್ರೆಯಿಂದ ಮಾತನಾಡಿದ್ದಾರೆ. ತಮಿಳುನಾಡು, ಇತರ ರಾಜ್ಯ ಹಾಗೂ ವಿಶ್ವದ ಜನತೆಯ ನಿರಂತರ ಪ್ರಾರ್ಥನೆಯ ಪರಿಣಾಮ ನಾನು ಪುನರ್ಜನ್ಮ ಪಡೆದಿದ್ದಾನೆ. ನಾನು ಚೇತರಿಸಿಕೊಳ್ಳುವ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತಸವಾಗುತ್ತದೆ' ಎಂದು ಜಯಲಲಿತಾ ಆಸ್ಪತ್ರೆಯಿಂದ ಸ್ವತಃ ಪತ್ರ ಮುಖೇನ ತಿಳಿಸಿದ್ದಾರೆ.
ಒಟ್ಟು 2 ಪುಟ ಬರೆದಿರುವುದನ್ನು ಎಡಿಎಂಕೆ ಪಕ್ಷದ ಮುಖ್ಯ ಕಚೇರಿಯಲ್ಲಿ ಬಿಡುಗಡೆ ಮಾಡಿ ಈ ವಿಷಯ ತಿಳಿಸಲಾಯಿತು. ಪರಿಪೂರ್ಣವಾಗಿ ಗುಣವಾಗಿ ನಿಮ್ಮ ಸೇವೆಗೆ ಶೀಘ್ರದಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಆಸ್ಪತ್ರೆ ಸೇರಿದಾಗ ಕೆಲವು ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ನನಗೆ ದುಃಖವಾಗಿದೆ. ಪಕ್ಷದ ಭವಿಷ್ಯ ಹಾಗೂ ಅಭಿವೃದ್ದಿಗಾಗಿ ಕಾರ್ಯಕರ್ತರು ನನಗೆ ಬಹಳ ಮುಖ್ಯ' ಎಂದು ತಿಳಿಸಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಮುಖ್ಯಮಂತ್ರಿ ಜಯಲಲಿತಾ ಅವರು ಚೆನ್ನೈ'ನ ಅಪೊಲೊ ಆಸ್ಪತ್ರೆಯಲ್ಲಿ ಸೆ.22 ರಂದು ದಾಖಲಾಗಿದ್ದರು.
