ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರ ಆಳೆತ್ತರದ ನೂತನ ಕಂಚಿನ ಪ್ರತಿಮೆಯನ್ನು ಇಲ್ಲಿ ನ ಎಐಎಡಿಎಂಕೆ ಪಕ್ಷದ ಕಚೇರಿ ಆವರಣದಲ್ಲಿ ಬುಧವಾರ ಅನಾ ವರಣಗೊಳಿಸಲಾಗಿದೆ. 

ಜಯಾರ ಪ್ರತಿಮೆಯನ್ನು ಜಯಾರ ಗುರು ಮಾಜಿ ಸಿಎಂ ಎಂಜಿಆರ್ ಪಕ್ಕದಲ್ಲೇ ಪ್ರತಿಷ್ಠಾಪಿಸಲಾಗಿದೆ. ಜಯಾರ 70 ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಕಂಚಿನ ಪ್ರತಿಮೆಯನ್ನು ಕಳೆದ ಫೆಬ್ರ ವರಿಯಲ್ಲಿ ಅನಾವರಣ ಗೊಳಿಸಲಾಗಿತ್ತು. 

ಆದರೆ, ಇದು ಜಯಾ ಬದಲಿಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾದ ಶಶಿಕಲಾರನ್ನು ಹೋಲುತ್ತಿದೆ ಎಂಬ ಕಾರಣಕ್ಕೆ ಭಾರೀ ಪ್ರತಿರೋಧಗಳು ವ್ಯಕ್ತವಾಗಿತ್ತು.