ಜಯಲಲಿತಾ ಗ್ರಹಗತಿಗಳನ್ನ ನೋಡಿದ್ರೆ, ಈ ಮಾತು ನಿಜ ಅನ್ನಿಸ್ತಾ ಇದೆ. 2018ರಲ್ಲಿ ಅಮ್ಮ ಅಂದುಕೊಂಡಿದ್ದೆಲ್ಲಾನೂ ಉಲ್ಟಾ ಆಗುತ್ತಂತೆ. ಇನ್ನೆರಡು ವರ್ಷದಲ್ಲಿ, ಜಯಲಲಿತಾ ಬದುಕಿನ ಚಿತ್ರಣನಾನೇ ಬದಲಾಗಿಬಿಡುತ್ತಂತೆ. ಹೀಗಂತ ಜ್ಯೋತಿಷಿಗಳು ಭವಿಷ್ಯ ನುಡೀತಿದ್ದಾರೆ.

ಚೆನ್ನೈ(ಅ.7): ತಮಿಳುನಾಡಿನ ಅಮ್ಮ ವಾರಗಟ್ಟಲೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ಉದಾಹರಣೆಗಳೇ ಇಲ್ಲ. ಆದ್ರೆ, ಕೆಲವು ದಿನಗಳಿಂದ ಆಸ್ಪತ್ರೆಯ ಬೆಡ್​ಮೇಲೆ ಮಲಗಿದ ಜೆ ಜಯಲಲಿತಾ ವಾರಗಳು ಉರುಳಿದರೂ ಮೇಲೇಳ್ತಿಲ್ಲ.

ಸೆಪ್ಸಿಸ್​ ಅನ್ನೋ ಕಾಯಿಲೆ ಜಯಲಲಿತಾರನ್ನ ಬಾದಿಸ್ತಾ ಇತ್ತು. ಅದಕ್ಕೆ ಅಪೋಲೋ ಆಸ್ಪತ್ರೆಯ ವೈದ್ಯರು ಟ್ರೀಟ್​ಮೆಂಟ್ ಕೊಡ್ತಾ ಇದ್ರು. ಜಯಲಲಿತಾ ಅವ್ರ ಕಂಡಿಷನ್​ ಕೈ ಮೀರ್ತಾ ಇದೆ ಅಂತ ಗೊತ್ತಾದಾಗ, ಲಂಡನ್​ನಿಂದ ವೈದ್ಯರನ್ನ ಕರೆಸಿಕೊಳ್ಳಲಾಯ್ತು.

ಇನ್ನೇನು ಜಯಲಲಿತಾ ಕ್ಯೂರ್ ಆಗ್ತಿದ್ದಾರೆ ಅಂತ ಆಸ್ಪತ್ರೆ ಮೂಲಗಳು ಹೇಳಿದ್ವು. ಆದ್ರೀಗ ಮತ್ತೊಂದು ಶಾಕಿಂಗ್​ ಸುದ್ದಿ ಹೊರ ಬಿದ್ದಿದೆ. 2018ರಲ್ಲಿ ಜಯಾ ಬದುಕಲ್ಲಿ ಒಂದು ಮಹಾ ಸಂಕಷ್ಟ ಎದುರಾಗುತ್ತಂತೆ. ಆ ಸಂಕಷ್ಟ ಜಯಲಲಿತಾ ಬದುಕಿನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸುತ್ತಂತೆ.

2018ರಕ್ಕೆ ಜಯಲಲಿತಾ ಬದುಕಲ್ಲಿ ಒಂದು ಮಹತ್ವದ ಬದಲಾವಣೆ ಆಗುತ್ತೆ. ಆ ಬದಲಾವಣೆ ಆಗ್ಲೇಬೇಕು. ಯಾವುದೇ ಕಾರಣಕ್ಕೆ, ಜಯಾ ಬದುಕಿನಲ್ಲಿ ಆಗೋ ಸಂಕಷ್ಟಗಳನ್ನು ತಡೆಯೋದಕ್ಕೆ ಆಗೋದಿಲ್ಲ. ಒಂದು ವೇಳೆ ಆ ಸಂಕಷ್ಟಗಳು ಎದುರಾದ್ರೆ ಮತ್ತಷ್ಟು ನಲುಗಿಹೋಗ್ತಾರಂತೆ ತಮಿಳುನಾಡಿನ ಅಮ್ಮ.

ಸೆಪ್ಟೆಂಬರ್​ 15, 2016ನೇ ತಾರೀಕಿನವರೆಗೆ, ಜಯಲಲಿತಾ ಸಮಸ್ಯೆಯಲ್ಲಿ ಒದ್ದಾಡಬೇಕಿದೆ. ಆ ನಂತರ, ಜಯಲಲಲಿತಾ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಆಗುತ್ತೆ. ಆದ್ರೆ 2018 ಮೇ ತಿಂಗಳ ನಂತರ, ತಮಿಳುನಾಡಿನ ಅಮ್ಮ ಮತ್ತಷ್ಟು ಆತಂಕ್ಕೆ ಒಳಗಾಗ್ತಾರಂತೆ. ಈ ಸುದ್ದಿ ಈಗ ಜಯಲಲಿತಾ ಬೆಂಬಲಿಗರನ್ನು ಆತಂಕ್ಕೆ ನೂಕಿದೆ.

ಅನಾಹುತದ ಬಗ್ಗೆ ಎಚ್ಚರಿಸಿತ್ತು ಮೂಕಪ್ರಾಣಿ

ಆದ್ರೆ ಜಯಲಲಿತಾಗೆ ಮುಂದೆ ಸಮಸ್ಯೆಗಳು ಕಾಡಬಹುದು ಅನ್ನೋ ಸೂಚನೆಯನ್ನು ಒಂದು ಮೂಕ ಪ್ರಾಣಿ ಕೊಟ್ಟಿತ್ತು. ಆದ್ರೆ ಆ ಮೂಕ ಪ್ರಾಣಿಯ ಸೂಚನೆಯನ್ನ ಜಯಲಲಿತಾ ನಿರ್ಲಕ್ಷಿಸಿದ್ರು. ಆ ನಿರ್ಲಕ್ಷವೇ ಜಯಲಲಿತಾರನ್ನ ಸಮಸ್ಯೆಯ ಸುಳಿಗೆ ನೂಕಿತ್ತು.. ಅಷ್ಟಕ್ಕೂ ಆ ಮೂಕ ಪ್ರಾಣಿ ಯಾವುದು ಗೊತ್ತಾ? ಜಯಲಲಿತಾ ಮೇಲೆ ದಾಳಿ ಮಾಡಿತ್ತು ಆನೆಮರಿ

2013ರಲ್ಲಿ ದೇವಸ್ಥಾನದ ಮುಂದಿದ್ದ ಆನೆಮರಿಗೆ ಪ್ರಸಾದ ಕೊಡೋದಕ್ಕೆ ಅಂತ ಹೋಗ್ತಿದ್ರು ಜಯಲಲಿತಾ. ಆದ್ರೆ ಪ್ರಸಾದ ಸ್ವೀಕರಿಸದೇ, ಜಯಲಲಿತಾ ಮೇಲೆ ದಾಳಿ ಮಾಡಿತ್ತು ಆನೆ ಮರಿ. ಇದಾದ ನಂತರ ಶುರುವಾಯ್ತು ಅಮ್ಮನಿಗೆ ಸಂಕಷ್ಟಗಳು.

ಜೈಲ್ ಸೇರಿದರು

ಈ ಘಟನೆ ನಡೆದ ಕ್ಷಣದಿಂದಲೇ, ಜಯಲಲಿತಾ ಬದುಕಲ್ಲಿ ಮಹತ್ವದ ಘಟನೆಗಳು ನಡೆಯೋದಕ್ಕೆ ಶುರುವಾದ್ವು. 18 ವರ್ಷಗಳಿಂದ ನಡೀತಿದ್ದ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಜೈಲು ಸೇರಿದ್ರು.

ಜಯಲಲಿತಾ ಗ್ರಹಗತಿಗಳನ್ನ ನೋಡಿದ್ರೆ, ಈ ಮಾತು ನಿಜ ಅನ್ನಿಸ್ತಾ ಇದೆ. 2018ರಲ್ಲಿ ಅಮ್ಮ ಅಂದುಕೊಂಡಿದ್ದೆಲ್ಲಾನೂ ಉಲ್ಟಾ ಆಗುತ್ತಂತೆ. ಇನ್ನೆರಡು ವರ್ಷದಲ್ಲಿ, ಜಯಲಲಿತಾ ಬದುಕಿನ ಚಿತ್ರಣನಾನೇ ಬದಲಾಗಿಬಿಡುತ್ತಂತೆ. ಹೀಗಂತ ಜ್ಯೋತಿಷಿಗಳು ಭವಿಷ್ಯ ನುಡೀತಿದ್ದಾರೆ.

ಜಯಲಲಿತಾಗೆ ಇದೆ ಸ್ತ್ರೀ ದೋಷ?

ಜಯಲಲಿತಾ ಬದುಕನ್ನ ಇವತ್ತಿಗೂ ಕಂಟ್ರೋಲ್ ಮಾಡ್ತಾ ಇರೋದು ಒಂದು ಲೇಡಿ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಆ ಲೇಡಿ ಆಡಿಸಿದಂತೆ ಜಯಲಲಿತಾ ಆಡ್ತಾರೆ. ಯಾಕೆ ಗೊತ್ತಾ? ಜಯಾ ಬದುಕಲ್ಲಿ ಸ್ತ್ರಿ ದೋಷ ಇದೆ. ಆ ಸ್ತ್ರೀ ಬೆರೆ ಯಾರೂ ಅಲ್ಲ. ಇದೇ ಶಶಿಕಲ

ರಾಶಿ, ಭವಿಷ್ಯದಲ್ಲಿ ಹೇಳೋದೆಲ್ಲಾ ನಾವು ನಂಬಬೇಕಾ ಅಂತ ನೀವು ಕೇಳಬಹುದು. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದ್ರೆ ಒಂದಂತೂ ಸತ್ಯ ತಮ್ಮ ಬದುಕಿನಲ್ಲಾದ ಎಲ್ಲಾ ಬದಲಾವಣೆಗೂ ಜನ್ಮ ನಕ್ಷತ್ರ, ರಾಶೀಫಲ ಕಾರಣ ಅನ್ನೋದನ್ನ ಖುದ್ದು ಜಯಲಲಿತಾನೇ ನಂಬ್ತಾರೆ.

ಭವಿಷ್ಯ ನಂಬುತ್ತಾರೆ ಜಯಾ

ಜಯಲಲಿತಾ ಜ್ಯೋತಿಷ್ಯವನ್ನು ನಂಬ್ತಾರೆ. ಇದಕ್ಕೆ ಸಾಕ್ಷಿ ಎಂಬಂತಿದೆ. ತಮ್ಮ ಹೆಸರಿನಲ್ಲಿ ಮಾಡಿಕೊಂಡ ಸಣ್ಣ ಬದಲಾವಣೆ. ಜೆ ಜಯಲಲಿತ. ಇದು ಮೊದಲಿನ ಹೆಸ್ರು. ಈ ಹೆಸರಲ್ಲಿ ಬಲ ಇಲ್ಲ ಅಂತ, ಕೊನೆಯಲ್ಲಿ ಇನ್ನೊಂದು ಎ ಜೋಡಿಸಿದ್ರು. ಅಲ್ಲಿಗೆ ಆರಂಭದಲ್ಲಿ ಡಬಲ್​ ಜೆ. ಕೊನೆಯಲ್ಲಿ ಡಬಲ್ ಎ ಆಯ್ತು. ಇದು ಜಯಲಲಿತಾಗೆ ಅದೃಷ್ಟ ತಂದಿತ್ತು.

ನಾಮಬಲದಿಂದಲೇ ಜಯಲಲಿತಾಗೆ ಜಯ ಸಿಗ್ತಿದೆ. ಹೆಸರು ಬದಲಾವಣೆ ಮಾಡಿಕೊಂಡ ನಂತರ, ಎಲ್ಲಾ ರೀತಿಯ ಯಶಸ್ಸು ಸಿಗ್ತಿದೆ ಅಂತ ಹೇಳಲಾಗ್ತಿದೆ.

ಚಾಮುಂಡಿಯ ಆರಾಧಕಿ ಜಯಾ

ಹಿಗೆ ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟುಕೊಂಡಿರೋ ಜಯಲಲಿತಾ, ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನ ಆರಾದಿಸ್ತಾರೆ. 2 ವರ್ಷಕ್ಕೊಮ್ಮೆ ಬಂದು ಪೂಜಿಸ್ತಾ ಇದ್ರು. ಆದ್ರೆ ಕೆಲ ವರ್ಷಗಳಿಂದ, ಚಾಮುಂಡಿ ದರ್ಶನಕ್ಕೆ ಬರಲೇ ಇಲ್ಲ ಜಯಲಲಿತಾ. ಜಯಾ ಬದುಕಲ್ಲಿ ಸಂಕಷ್ಟಗಳು ಬರ್ತಿರೋದಕ್ಕೆ ಚಾಮುಂಡಿಯ ಸಿಟ್ಟೂ ಕಾರಣ ಇರಬಹುದು ಅಂತ ಜ್ಯೋತಿಷಿಗಳು ಹೇಳ್ತಿದ್ದಾರೆ.

ಜಯಾ ಜ್ಯೋತಿಷ್ಯದಲ್ಲಿ, ಸಂಕಷ್ಟಗಳ ಬಗ್ಗೆ ಸ್ಪಷ್ಟ ಮಾಹಿತಿ ಇದೆ. 2018ಕ್ಕೆ ಜಯಾಗೆ ಸಂಕಷ್ಟ ಎದುರಾಗಬಹುದು ಅಂತ, ಇದೇ ಜ್ಯೋತಿಷ್ಯದಲ್ಲಿದೆ. ಇದು ತಮಿಳುನಾಡಿನ ಅಮ್ಮನ ಆರಾಧಕರಲ್ಲಿ ಆತಂಕ ಮೂಡಿಸ್ತಿದೆ.

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್

(ಸೂಚನೆ : ಜನರಾಡುವಕಲ್ಪಿತವರದಿಯಸುದ್ದಿಯಷ್ಟೆ. ವಾಸ್ತವಾಂಶವನ್ನುಕುರಿತುವರದಿಮಾಡಿಲ್ಲ)