ಒಂದು ಬಣ ಪನ್ನೀರ್ ಸೆಲ್ವಂಗೆ ಪಟ್ಟ ನೀಡಲು ಬಯಸಿದ್ದರೆ, ಶಶಿಕಲಾ ಬಣ ಶಶಿಕಲಾಗೆ ಪಟ್ಟ ನೀಡುವಂತೆ ಪಟ್ಟು ಹಿಡಿದಿದೆ. ಎರಡೂ ಬಣಗಳ ನಡುವೆ ಶೀತಲ ಸಮರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿಯೇ ಶಶಿಕಲಾ, ಜಯಲಲಿತಾ ಸಾವಿನ ಸುದ್ದಿಯನ್ನ ತೇಲಿಬಿಟ್ಟಿರಬಹುದು ಎನ್ನಲಾಗಿದೆ.

ಚೆನ್ನೈ(ಡಿ.05): ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆನ್ನಲ್ಲೇ ಅಣ್ಣಾಡಿಎಂಕೆ ಪಕ್ಷದಲ್ಲಿ ಅಧಿಕಾರಕ್ಕಾಗಿ ರಾಜಕೀಯ ಚದುರಂಗದಾಟ ಶುರುವಾಗಿದೆ. ಸಿಎಂ ಪಟ್ಟಕ್ಕೆ ಪಟ್ಟುಹಿಡಿದಿರುವ ಜಯಲಲಿತಾ ಸ್ನೇಹಿತೆ ಶಶಿಕಲಾ ಷಡ್ಯಂತ್ರ ನಡೆಸಿದ್ದಾಳೆ ಎಂಬ ಸ್ಫೋಟಕ ಮಾಹಿತಿ ಸುವರ್ಣ ನ್ಯೂಸ್`ಗೆ ಸಿಕ್ಕಿದೆ.

ಒಂದು ಬಣ ಪನ್ನೀರ್ ಸೆಲ್ವಂಗೆ ಪಟ್ಟ ನೀಡಲು ಬಯಸಿದ್ದರೆ, ಶಶಿಕಲಾ ಬಣ ಶಶಿಕಲಾಗೆ ಪಟ್ಟ ನೀಡುವಂತೆ ಪಟ್ಟು ಹಿಡಿದಿದೆ. ಎರಡೂ ಬಣಗಳ ನಡುವೆ ಶೀತಲ ಸಮರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿಯೇ ಶಶಿಕಲಾ, ಜಯಲಲಿತಾ ಸಾವಿನ ಸುದ್ದಿಯನ್ನ ತೇಲಿಬಿಟ್ಟಿರಬಹುದು ಎನ್ನಲಾಗಿದೆ. ಇದೇ ಕಾರಣಕ್ಕೆ ಬೆಳಗ್ಗಿನಿಂದ ಎರಡು ಬಾರಿ ಶಾಸಕಾಂಗ ಸಭೆ ನಡೆದರೂ ಒಗ್ಗಟ್ಟು ಮೂಡಿಲ್ಲ.

ಶಶಿಕಲಾ ವರ್ತನೆಯಿಂದ ಪಕ್ಷದಲ್ಲೇ ಆಕ್ರೋಶ ಭುಗಿಲೆದ್ದಿದೆ ಎಂದು ತಿಳಿದುಬಂದಿದೆ.