Asianet Suvarna News Asianet Suvarna News

ಅಮ್ಮ ಸತ್ತಿದ್ದು ಆಸ್ಪತ್ರೆಯಲ್ಲಲ್ವಂತೆ! ಯಾರಿಗೂ ಗೊತ್ತಿರದ ಸ್ಫೋಟಕ ಮಾಹಿತಿ,ಬೆಚ್ಚಿ ಬೀಳಿಸಿರುವ ಹಲವು ಸಂಗತಿಗಳು !

ಡಿಸೆಂಬರ್​6 ರವರೆಗೆ. ಅಂದರೆ ಸುಮಾರು 75 ದಿನ ಜಯಲಲಿತಾರ ಮುಖವಿರಲಿ ಒಂದು ಫೋಟೋ ಕೂಡ ಹೊರಗೆ ತೋರಿಸಿರಲಿಲ್ಲ. ಇದನ್ನ ನೋಡಿದ್ದ ಜನರು ಅಮ್ಮ ಎಲ್ಲಿ ಅಂತ ಪ್ರಶ್ನೆ ಮಾಡಿದ್ದೂ ಉಂಟು. ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಸೇರಿದಂತೆ ಹಲವರು ಜಯಲಲಿತಾಗೆ ಏನಾಗಿದೆ ಹೇಳಿ ಅಂತ ಪಟ್ಟು ಹಿಡಿದಿದ್ರು. ಆದ್ರೆ ಆಸ್ಪತ್ರೆಯವರಾಗಲೀ, ಎಐಎಡಿಎಂಕೆ ನಾಯಕರಾಗ್ಲೀ, ಈ ಬಗ್ಗೆ ತುಟಿಕ್ ಪಿಟಿಕ್ ಅನ್ಲಿಲ್ಲ.

Jayalalitha Death Secrets

ತಮಿಳುನಾಡಿನ ಅಮ್ಮ ಜೆ. ಜಯಲಲಲಿತಾ ಈಗ ನೆನಪು ಮಾತ್ರ. ಡಿಸೆಂಬರ್​ 5 ನೇ ತಾರೀಕು ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರು ಕೊನೆಯುಸಿರೆಳೆದಿದ್ದಾರೆ. ಇದು ಇಡೀ ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ಈ ಸತ್ಯದ ಬೆನ್ನಲ್ಲೇ ಇನ್ನೊಂದು ಸುದ್ದಿ ಕೂಡ ಓಡಾಡ್ತಿದೆ. ಅಸಲಿಗೆ ತಮಿಳುನಾಡಿನ ಅಮ್ಮ ಜೆ. ಜಯಲಲಿತಾ ಅಪೋಲೋ ಆಸ್ಪತ್ರಯಲ್ಲೇ ಇರಲಿಲ್ಲ. 2 ತಿಂಗಳ ಹಿಂದೇನೇ ಅವ್ರನ್ನ ಬೇರೆ ಕಡೆ ಶಿಫ್ಟ್​ ಮಾಡಲಾಗಿತ್ತು ಅನ್ನೋ ಸುದ್ದಿ ಇದೆ. ಅಷ್ಟಕ್ಕೂ ಜಯಲಲಿತಾರನ್ನ ಅಪೋಲೋ ಆಸ್ಪತ್ರೆಯಿಂದ ಬೇರೆ ಕಡೆ ಶಿಫ್ಟ್​ ಮಾಡಿದ್ದು ಯಾರು? ಅಲ್ಲಿ ಜಯಲಲಿತಾಗೆ ಏನ್ ಮಾಡಿದ್ರು? ಆ ನಿಗೂಢ ಜಾಗದಲ್ಲೇ ಜಯಲಲಿತಾ ವಿಧಿವಶರಾದ್ರಾ? ಜಯಲಲಿತಾ ಇಹಲೋಕ ತ್ಯಜಿಸಿದ ನಂತರ, ಅವ್ರನ್ನ ಮತ್ತೆ ಅಪೊಲೋ ಆಸ್ಪತ್ರೆಗೆ ತರಲಾಯ್ತಾ?  ಎಲ್ಲದಕ್ಕೂ ಉತ್ತರ ಈ ವರದಿಯಲ್ಲಿದೆ ನೋಡಿ.

ಯಾರಿಗೂ ಗೊತ್ತಿರದ ಸ್ಫೋಟಕ ಮಾಹಿತಿ..!

ಡಾ.ಜೆ.ಜಯಲಲಿತಾ. ತಮಿಳುನಾಡಿನ ಅಮ್ಮ, ತಮಿಳ್ ಮಕ್ಕಳ ಪಾಲಿನ ಆರಾಧ್ಯ ದೈವ. ಇಷ್ಟು ದಿನ ಈ ಜನರ ಬದುಕಿನಲ್ಲಿ ಉಸಿರಾಗಿದ್ದ ಅಮ್ಮ, ಇವರನ್ನ ಬಿಟ್ಟು ಅಗಲಿದ್ದಾರೆ. ಡಿಸೆಂಬರ್​ 5 ನೇ ತಾರೀಕು ರಾತ್ರಿ 11.30ರ ಸುಮಾರಿಗೆ ಕೊನೆಯುಸಿರೆಳೆದಿದ್ರು ಜಯಲಲಿತಾ.

ತಮಿಳುನಾಡಿನ ಜನ ಇಷ್ಟೋಂದು ಭಾವುಕರಾಗಿರೋದಕ್ಕೆ ಕಾರಣ ಇದೆ. ಜಯಲಲಿತಾರನ್ನ ಹೊರತುಪಡಿಸಿ, ಯಾರನ್ನೂ ಇಷ್ಟೋಂದು ಹಚ್ಚಿಕೊಂಡಿರಲಿಲ್ಲ ಈ ಜನ. ಜಯಲಲಿತಾ ಬಗ್ಗೆ ಯಾಕಿಷ್ಟು ಕಾಳಜಿ, ಯಾಕಿಷ್ಟು ಅಭಿಮಾನ. ಯಾಕಿಷ್ಟು ಪ್ರೀತಿ ಗೊತ್ತಾ? ಅಮ್ಮ ತಮಿಳುನಾಡಿನ ಮನೆ ಮಾತಾಗಿದ್ರು. ಕುಟುಂಬದ ಸದಸ್ಯೆಯಾಗಿದ್ರು, ಮನೆ ಮಗಳಾಗಿದ್ರು, ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ಮಕ್ಕಳನ್ನ ನೋಡಿಕೊಳ್ತಿದ್ದ ತಾಯಿಯಾಗಿದ್ರು.

ಅಮ್ಮ ಇನ್ನಿಲ್ಲ.. ಈ ಮಾತನ್ನ ಇವ್ರಿಂದ ಅರಗಿಸಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಜೆ. ಜಯಲಲಿತಾ ಕಣ್ಣಲ್ಲಿ ಒಂಚೂರು ನೀರು ಬಂದ್ರೂ ಇವ್ರು ತಡ್ಕೋತಾ ಇರಲಿಲ್ಲ. ಅಂಥಾದ್ರಲ್ಲಿ ಅವ್ರ ಸಾವನ್ನ ಈ ಜನ ಅದ್ಹೇಗೆ ಅರಗಿಸಿಕೊಳ್ತಾರೋ ಗೊತ್ತಾಗ್ತಿಲ್ಲ.

ಯಾರಿಗೂ ತಿಳಿಯದ ಸ್ಫೋಟಕ ಸುದ್ದಿ! : ಶಾಕಾದ ತಮಿಳಿಗರು

ಜಯಲಲಿತಾ ಇಹಲೋಕ ತ್ಯಜಿಸಿದ್ದಾಗಿದೆ. ಅವರ ಬದುಕಿನ ಒಂದಷ್ಟು ರಹಸ್ಯಗಳು ಅವರ ಜೊತೆಗೇ ಸಮಾಧಿಯಾಗಿವೆ. ಜಯಾ ಬದುಕಿನ ಪುಟಗಳು ಡಿಸೆಂಬರ್​ 5 ಕ್ಕೆ ಕೊನೆಯಾಗಿವೆ. ಈಗೇನಿದ್ರೂ ಕೇವಲ ನೆನಪು ಮಾತ್ರ.. ಪರಿಸ್ತಿತಿ ಹೀಗಿರುವಾಗ್ಲೇ, ಒಂದು ಸ್ಫೋಟಕ ಸುದ್ದಿ ಹೊರ ಬಿದ್ದಿದೆ.. ಅಸಲಿಗೆ ಸೆಪ್ಟೆಂಬರ್​ 22 ನೇ ತಾರೀಕು ಅಪೋಲೋ ಆಸ್ಪತ್ರೆಗೆ ಸೇರಿದ ಜೆ ಜಯಲಲಿತಾ, ನಂತರದ ದಿನಗಳಲ್ಲಿ ಆಸ್ಪತ್ರೆಯಲ್ಲೇ ಇರಲಿಲ್ಲ. ಅವ್ರನ್ನ ಬೇರೆ ಕಡೆ ರಹಸ್ಯವಾಗಿ ಶಿಫ್ಟ್​ ಮಾಡಲಾಗಿತ್ತು ಅನ್ನೋ ಮಾತುಗಳು ಇದೀಗ ಕೇಳಿ ಬರ್ತಿವೆ. ಇದು ಇಡೀ ತಮಿಳುನಾಡಿನ ಜನರಿಗೆ ಶಾಕ್ ನೀಡಿದೆ.

ಹೌದು ಸೆಪ್ಟಂಬರ್​ 22 ನೇ ತಾರೀಕು. ರಾತ್ರಿ 9.30ರ ಸಮಯ ಇರಬಹುದು. ಜಯಲಲಿತಾ  ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ, ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ರು. ಸುಮಾರು ಎಂಟತ್ತು ದಿನಗಳ ಕಾಲ ಅಮ್ಮ , ಇದೇ ಅಪೋಲೋ ಆಸ್ಪತ್ರೆಯಲ್ಲೇ ಇದ್ದರು. ಆದರೆ ಅಕ್ಟೋಬರ್​ ಮೊದಲ ವಾರದಲ್ಲಿ ಅಪೋಲೋ ಆಸ್ಪತ್ರೆಯಿಂದ ಅಮ್ಮನನ್ನ ಶಿಫ್ಟ್​ ಮಾಡಲಾಗಿತ್ತಂತೆ. ಯಾರಿಗೂ ಗೊತ್ತಿಲ್ಲದಂತೆ ಇನ್ನೊಂದು ರಹಸ್ಯ ತಾಣಕ್ಕೆ ಜಯಲಲಿತಾರನ್ನ ಕೊಂಡೊಯ್ಯಲಾಗಿತ್ತಂತೆ.

2 ತಿಂಗಳಿಂದ ಜಯಲಲಿತಾರನ್ನ  ರಹಸ್ಯ ತಾಣದಲ್ಲಿರಿಸಿದ್ರಾ?

ಹೌದು, ಈ ಪ್ರಶ್ನೆ ಇದೀಗ ಎಲ್ಲರನ್ನ ಕಾಡ್ತಾ ಇದೆ. ಆರಂಭದಿಂದಲೂ ಜನರಿಗೆ ಈ ಅನುಮಾನ ಕಾಡಿತ್ತು. ಯಾಕಂದ್ರೆ ಆಸ್ಪತ್ರೆ ಸೇರಿದ ದಿನದಿಂದ, ಡಿಸೆಂಬರ್​6 ರವರೆಗೆ. ಅಂದರೆ ಸುಮಾರು 75 ದಿನ ಜಯಲಲಿತಾರ ಮುಖವಿರಲಿ ಒಂದು ಫೋಟೋ ಕೂಡ ಹೊರಗೆ ತೋರಿಸಿರಲಿಲ್ಲ. ಇದನ್ನ ನೋಡಿದ್ದ ಜನರು ಅಮ್ಮ ಎಲ್ಲಿ ಅಂತ ಪ್ರಶ್ನೆ ಮಾಡಿದ್ದೂ ಉಂಟು. ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಸೇರಿದಂತೆ ಹಲವರು ಜಯಲಲಿತಾಗೆ ಏನಾಗಿದೆ ಹೇಳಿ ಅಂತ ಪಟ್ಟು ಹಿಡಿದಿದ್ರು. ಆದ್ರೆ ಆಸ್ಪತ್ರೆಯವರಾಗಲೀ, ಎಐಎಡಿಎಂಕೆ ನಾಯಕರಾಗ್ಲೀ, ಈ ಬಗ್ಗೆ ತುಟಿಕ್ ಪಿಟಿಕ್ ಅನ್ಲಿಲ್ಲ. ಪರಿಣಾಮ ಜಯಲಲಿತಾ ಆರೋಗ್ಯದ ವಿಷಯ, ಮದ್ರಾಸ್ ಹೈಕೋರ್ಟ್​ ಅಂಗಳ ತಲುಪಿತ್ತು.

ಮದ್ರಾಸ್ ಹೈಕೋರ್ಟ್​ ಅಂಗಳ ತಲುಪಿತ್ತು

ಜಯಲಲಿತಾ ಅವ್ರಿಗೆ ಏನಾಗಿದೆ? ಯಾಕೆ ಅವ್ರನ್ನ ನೋಡೋದಕ್ಕೆ ಯಾರನ್ವನೂ ಬಿಡ್ತಾ ಇಲ್ಲ. ಜಯಾ ಗೆಳತಿ ಶಶಿಕಲಾ ಎಲ್ಲರನ್ನೂ ತಡೆದು ವಾಪಸ್ ಕಳಿಸ್ತಿದ್ದಾರಲ್ಲಾ ಯಾಕೆ? ಅಮ್ಮನ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ತಿವೆ. ಅವರ ಮುಖಾನ ಒಂದ್ಸಲಾನಾದ್ರೂ ತೋರಿಸಿ. ಅವ್ರ ಆರೋಗ್ಯದ ಬಗ್ಗೆ ಮಾಹಿತಿ ಕೊಡಿ ಅಂತ ಓರ್ವ ವ್ಯಕ್ತಿ ಮದ್ರಾಸ್​ ಹೈಕೋರ್ಟ್​ನ ಮೆಟ್ಟಿಲೇರ್ತಾರೆ. ಯಾಕಂದ್ರೆ ಆ ವ್ಯಕ್ತಿಗೆ, ಅದಾಗಲೇ ಒಂದಷ್ಟು ಸ್ಫೋಟಕ ಸುದ್ದಿ ಗೊತ್ತಾಗಿತ್ತು. ಆಸ್ಪತ್ರೆಯ ಒಳಗೇ ಎನೋ ನಡೀತಿದೆ ಅನ್ನೋದು ತಿಳಿದಿತ್ತು. ಇದೇ ಕಾರಣಕ್ಕೆ, ಅಮ್ಮನ ವಿಷಯವನ್ನ ಕೋರ್ಟ್ ಅಂಗಳಕ್ಕೆ ತಂದಿದ್ರು. ಅಂದ್ಹಾಗೆ ಜಯಲಲಿತಾ ವಿಷಯದಲ್ಲಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಟ್ರಾಫಿಕ್ ರಾಮಸ್ವಾಮಿ.

ಸೆಪ್ಟೆಂಬರ್​ 22 - ಜೆ. ಜಯಲಲಿತಾ ಆಸ್ಪತ್ರೆ ಸೇರಿದ್ದರು

ಸೆಪ್ಟೆಂಬರ್​ 24 - ಬೇರೆಡೆ ಶಿಫ್ಟ್​ ಮಾಡುವ ಸುದ್ದಿ ಹಬ್ಬಿತ್ತು

ಅಕ್ಟೋಬರ್​ 26  - ವಿದೇಶಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ

ಅಕ್ಟೋಬರ್​ 04 - ಹೈಕೋರ್ಟ್ ಮೆಟ್ಟಿಲೇರಿದ ರಾಮಸ್ವಾಮಿ

ಹೌದು, ಸೆಪ್ಟೆಂಬರ್​ 22 ರಂದು ಜಯಲಲಿತಾ ಅಪೋಲೋ ಆಸ್ಪತ್ರೆಗೆ ಅಡ್ಮಿಟ್ ಆಗ್ತಾರೆ. ಆದ್ರೆ ಎರಡು ದಿನ ಆದರೂ ಅವರ ಆರೋಗ್ಯದ ಸುಧಾರಿಸಿಕೊಳ್ಳದ ಕಾರಣ, ಸೆಪ್ಟೆಂಬರ್​ 24 ನೇ ತಾರೀಕು, ಅಮ್ಮನನ್ನ ಬೇರೆ ಕಡೆ ಶಿಫ್ಟ್​ ಮಾಡಬಹುದು ಅನ್ನೋ ಸುದ್ದಿ ಇಡೀ ತಮಿಳುನಾಡಿನಾದ್ಯಂತ ಹಬ್ಬುತ್ತೆ. ಅಪೋಲೋ ಆಸ್ಪತ್ರೆ ವೈದ್ಯರು ಅಮ್ಮನನ್ನ ಉಳಿಸಿಕೊಳ್ಳೋದಕ್ಕೆ, ಲಂಡನ್​ ಮೂಲದ ವೈದ್ಯರನ್ನ ಸಂಪರ್ಕಿಸಿದ್ದರೂ ಅನ್ನೋದು ಗೊತ್ತಾಗುತ್ತೆ. ಈ ಎಲ್ಲಾ ಬೆಳವಣಿಗೆಗಳಿಂದ ಅನುಮಾನ ಗೊಂಡ ಟ್ರಾಫಿಕ್ ರಾಮಸ್ವಾಮಿ ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಸ್ತಾರೆ. ಆದ್ರೂ ಜಯಲಲಿತಾ ಮುಖ ಮಾತ್ರ ಯಾರಿಗೂ ಕಾಣಿಸೋದಿಲ್ಲ. ಬದಲಿಗೆ ಅಮ್ಮ ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ ಅನ್ನೋ ಪ್ರೆಸ್​ನೋಟ್​ ಮಾತ್ರ ರಿಲೀಸ್ ಆಗುತ್ತೆ.

ಕ್ಷೀಣಿಸಿದ ಆರೋಗ್ಯ, ಬಲವಾಯ್ತು ಸ್ಥಳಾಂತರದ ಆಲೋಚನೆ : ಆಸ್ಪತ್ರೆ ಸುತ್ತಲೂ 2 ಕಿ.ಮೀ ನಿಷೇಧಾಜ್ಞೆ

ಅಮ್ಮನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸ್ತಾ ಹೋಗ್ತಿತ್ತು. ಲಂಡನ್​ ವೈದ್ಯರು ನಿರಂತರ ಸಂಪರ್ಕದಲ್ಲಿದ್ದರೂ ಅಮ್ಮನ ಆರೋಗ್ಯ ಹತೋಟಿಗೆ ಬರಲೇ ಇಲ್ಲ. ಇದರಿಂದ ಆತಂಕಕ್ಕೆ ಒಳಗಾದ ಲಂಡನ್​ ಮೂಲದ ವೈದ್ಯ ರಿಚರ್ಡ್​ ಬೀಲೇ, ಅಲ್ಲೇ ಇದ್ದರೆ ಅಮ್ಮನನ್ನ ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ. ಬೇರೆ ಕಡೆ ಶಿಫ್ಟ್​ ಮಾಡಲೇಬೇಕು ಅನ್ನೋ ಸಲಹೆಯನ್ನ ಚೆನ್ನೈ ವೈದ್ಯರಿಗೆ ನೀಡಿದ್ದರಂತೆ ಯಾವುದಕ್ಕೂ ನಾನು ಬಂದು ಒಂದ್ಸಲ ಜಯಲಲಿತಾ ಅವರನ್ನು ನೋಡ್ತೀನಿ ಅಂತ ಹೇಳಿದ್ರು ಲಂಡನ್​ ಡಾಕ್ಟರ್​. ಅಮ್ಮನನ್ನ ಶಿಫ್ಟ್​ ಮಾಡುವ ಅಗತ್ಯವಿದೆ ಅನ್ನೋದನ್ನ  ಅರಿತ ಎಐಎಡಿಎಂಕೆ ಮತ್ತು ಅಪೋಲೋ ಆಸ್ಪತ್ರೆ ವೈದ್ಯರು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಅಂತ ಹೇಳಲಾಗುತ್ತಿದೆ. ಈ ಸಂಬಂಧ ಆಸ್ಪತ್ರೆ ಸುತ್ತ ಯಾರೂ ಬಾರದಂತೆ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು. ಅಮ್ಮನನ್ನ ಶಿಫ್ಟ್ ಮಾಡೋ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಬಹುದು ಅನ್ನೋ ಕಾರಣಕ್ಕೆ, ಎಲ್ಲಾ ಸಿಸಿಟಿವಿ ದೃಶ್ಯಗಳನ್ನ ಡಿಲಿಟ್ ಮಾಡಲಾಗಿತ್ತು ಅನ್ನೋ ಸುದ್ದೀನೂ ಇದೆ.

ಸಿಸಿಟಿವಿ ದೃಶ್ಯಗಳನ್ನ ಡಿಲಿಟ್ ಮಾಡಿದ್ರು !

ಆಸ್ಪತ್ರೆ ಸುತ್ತಾ 2 ಕಿ.ಮೀ ನಿಷೇಧಾಜ್ಞೆ ಹೇರಿ ಸಿಸಿಟಿವಿ ದೃಶ್ಯಗಳನ್ನ ಡಿಲಿಟ್ ಮಾಡಿ ಸಾಕ್ಷಿನೇ ಇಲ್ಲದಂತೆ ಅಮ್ಮನನ್ನು ಆಸ್ಪತ್ರೆಯಿಂದ ಹೊರ ತಂದಿದ್ರು ಅಂತ ಹೇಳಲಾಗ್ತಿದೆ. ಇದಕ್ಕೆ ಕಾರಣ ಅಮ್ಮನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡ್ತಾ ಇದ್ದದ್ದು.

ಬೀಲೆ ಜೊತೆಗೆ ಏಮ್ಸ್ ವೈದ್ಯರು ಚೆನ್ನೈಗೆ ಆಗಮಿಸಿದ್ರು, ಈ ವೇಳೆ ಅಮ್ಮನ ಆರೋಗ್ಯ ತಪಾಸಣೆ ನಡೆಸಿ, ಅಮ್ಮ ಚೆನ್ನಾಗಿದ್ದಾರೆ ಡೋಂಟ್ ವರಿ ಅಂತ ಎಲ್ಲರನ್ನೂ ಸಮಾಧಾನ ಮಾಡಿದ್ರು. ಆದ್ರೆ, ತೀವ್ರವಾಗಿ ಅನಾರೋಗ್ಯಕ್ಕೀಡಾಗಿದ್ದ ಜಯಲಲಿತಾ ಅವ್ರನ್ನ, ಆ ತಕ್ಷಣವೇ ಬೇರೆ ಕಡೆ ಶಿಫ್ಟ್​ ಮಾಡಲಾಗಿತ್ತು ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೆ ಇದು ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಗೊತ್ತಿತ್ತು. ರಾತ್ರೋ ರಾತ್ರಿ ಅಮ್ಮನನ್ನ ಬೇರೆ ಜಾಗಕ್ಕೆ ಶಿಫ್ಟ್ ಮಾಡಲಾಗಿತ್ತು.

ಅಪೋಲೋ ಆಸ್ಪತ್ರೆಯಲ್ಲಿ ಅಮ್ಮನೇ ಇರಲಿಲ್ಲವಂತೆ?, ಈ ಕಾರಣಕ್ಕೆ ನೋಡಲು ಬಂದವರನ್ನ ಬಿಡುತ್ತಿರಲಿಲ್ಲವಂತೆ?

ಅಮ್ಮನಿಗೆ ಏನಾಗಿದೆ ನೋಡೋಣ ಅಂತ, ಇಡೀ ತಮಿಳುನಾಡಿನ ಘಟಾನುಘಟಿ ನಾಯಕರು ಆಸ್ಪತ್ರೆಗೆ ಆಗಮಿಸಿದ್ರು. ಆದ್ರೆ ಯಾರನ್ನೂ ಒಳಗೆ ಬಿಟ್ಟಿರಲಿಲ್ಲ. ಖುದ್ದು ಜಯಲಲಿತಾರ ಸಾಕು ಮಗ ಸುಧಾಕರನ್​ ಆಸ್ಪತ್ರೆಗೆ ಬಂದಾಗಲೂ, ಒಳಗೆ ಬಿಟ್ಟಿರಲಿಲ್ಲ. ಹೀಗಾಗಿ ಹೊರಗಿಂದಲೇ ವಾಪಸ್ ಬಂದಿದ್ದ ದತ್ತು ಪುತ್ರ ಸುಧಾಕರನ್​.

ಇನ್ನು ಅಮ್ಮನನ್ನ ನೋಡ್ಕೊಂಡು ಬಂದಿದ್ದೀನಿ.. ಅವ್ರ ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದೆ ಅಂತ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್​ ರಾವ್​ ಹೇಳಿಕೆ ನೀಡಿದ್ರು. ಆದ್ರೆ ವಾಸ್ತವಿಕವಾಗಿ ಅವರೂ ಅಮ್ಮನನ್ನ ನೇರವಾಗಿ ನೋಡಿರಲಿಲ್ಲ. ಬರೀ ಕಿಟಕಿಯೊಂದ ಐಸಿಯು ರೂಂನಲ್ಲಿ ಕಣ್ಣಾಡಿಸಿ ಬಂದಿದ್ರಂತೆ.

ಪನೀರ್​ ಸೆಲ್ವಂರನ್ನೂ ಒಳಗೆ ಬಿಡಲಿಲ್ವಾ ಶಶಿಕಲಾ? : ಶಶಿಕಲಾ-ಪನೀರ್​ ಸೆಲ್ವಂ ಇಬ್ಬರಿಗೂ ಜಗಳವಾಗಿತ್ತಾ?

ಇನ್ನು ಜಯಲಲಿತಾರ ನಿಷ್ಠಾವಂತರಲ್ಲಿ ಒಬ್ಬರಾದ ಓ. ಪನೀರ್​ ಸೆಲ್ವಂ ಅವ್ರನ್ನೂ ಕೂಡ ಶಶಿಕಲಾ  ಜಯಾ ಇದ್ದ ಕೊಠಡಿಗೆ ಬಿಟ್ಟಿರಲಿಲ್ಲ ಅನ್ನೋ ಮಾತಿದೆ.  ಇದೇ ಕಾರಣಕ್ಕೆ ಶಶಿಕಲಾ ಮತ್ತು ಪನೀರ್ ಸೆಲ್ವಂ ನಡುವೆ ಆಸ್ಪತ್ರೆಯಲ್ಲೇ ಜಗಳವಾಗಿತ್ತು ಅನ್ನೋ ಸುದ್ದೀನೂ ಇದೆ. ಇನ್ನೊಂದು ವಿಷ್ಯ ಏನ್​ ಗೊತ್ತಾ? ಜಯಲಲಿತಾರನ್ನ ಬೇರೆ ಕಡೆ ಶಿಫ್ಟ್​ ಮಾಡಿದ್ದರ ಬಗ್ಗೆ ಪನೀರ್​ ಸೆಲ್ವಂಗೆ ಮಾಹಿತಿನೇ ಇರಲಿಲ್ಲ ಅಂತ ಹೇಳಲಾಗ್ತಿದೆ.. ಶಶಿಕಲಾನೇ ಗುಪ್ತವಾಗಿ ಅಮ್ಮನನ್ನ ಬೇರೆ ಜಾಗಕ್ಕೆ ಶಿಫ್ಟ್​ ಮಾಡಿದ್ದರು ಅನ್ನೋ ಸುದ್ದಿ ಹರಿದಾಡ್ತಿದೆ. ಇದೇ ಕಾರಣಕ್ಕೆ ಅಮ್ಮನನ್ನ ನೋಡೋದಕ್ಕೆ ಆಸ್ಪತ್ರೆ ಹತ್ರ ಯಾರೇ ಬಂದ್ರು, ಅವ್ರನ್ನ ಒಳಗೆ ಬಿಡ್ತಾ ಇರಲಿಲ್ವಂತೆ ಶಶಿಕಲಾ.. ಪನೀರ್ ಸೆಲ್ವಂ ಬಂದಾಗಲೂ ಶಶಿಕಲಾ ಆಸ್ಪತ್ರೆ ಒಳಗೆ ಬಿಟ್ಟಿರಲಿಲ್ಲ. ಇದ್ರಿಂದ ಇಬ್ಬರ ನಡುವೆ ಜಗಳ ಆಗಿತ್ತು ಅಂತ ಹೇಳಲಾಗುತ್ತಿದೆ.

ಮೋದಿಗೂ ಗೊತ್ತಿತ್ತು

ಇನ್ನು ಸಿಎಂ ಸಿದ್ದರಾಮಯ್ಯನವರ ಮಗನಿಗೆ ಹುಷಾರಿಲ್ಲ ಅಂತ ಗೊತ್ತಾಗ್ತಿದ್ದ ಹಾಗೆ, ಏರ್​ಪೋರ್ಟ್​ಗೆ ಬಂದು ಧೈರ್ಯ ತುಂಬಿದ್ರು ಮೋದಿ. ಆದ್ರೆ 75 ದಿನ ಆದ್ರೂ ಒಂದು ರಾಜ್ಯದ ಸಿಎಂ ಆಸ್ಪತ್ರೆಯ ಬೆಡ್​ ಮೇಲೆ ಮಲಗಿದ್ದಾರೆ ಅಂದರೆ, ನೋಡೋದಕ್ಕೆ ಬರ್ತಾ ಇರಲಿಲ್ವಾ? ಖಂಡಿತ ಬರ್ತಾ ಇದ್ರು. ರಾಜಕೀಯದ ಕಾರಣಕ್ಕೋ, ಸ್ನೇಹ ಪ್ರೀತಿ ಮಾನವತೆಯ ಕಾರಣಕ್ಕೋ. ಒಟ್ಟಿನಲ್ಲಿ ಆಸ್ಪತ್ರೆಗೆ ಬಂದು ಮಾತಾಡಿಸ್ತಿದ್ರು ಮೋದಿ. ಆದ್ರೆ ಒಂದು ದಿನವೂ ಮೋದಿ ಇತ್ತ ಸುಳಿಯಲಿಲ್ಲ. ಮೋದಿ ಬಂದಿದ್ದು ಜಯಲಲಿತಾ ಇನ್ನಿಲ್ಲ ಅಂದಾಗ.. ಇದನ್ನ ನೋಡಿದ್ರೆನೇ ಗೊತ್ತಾಗುತ್ತೆ.. ಬಹುಶಃ ಜಯಲಲಿತಾ ಅಪೋಲೋ ಆಸ್ಪೊತ್ರೆಯಲ್ಲಿ ಇರಲಿಲ್ಲ. ಇದೇ ಕಾರಣಕ್ಕೆ ಮೋದಿ ನೋಡೋದಕ್ಕೆ ಬಂದಿಲ್ಲ ಅಂತ..

ಅಕ್ಟೋಬರ್​ 13 ನೇ ತಾರೀಕಿನ ನಂತರ ಶಿಫ್ಟ್ ಆಗಿದ್ದರು ಅಮ್ಮ

 ಅಮ್ಮನನ್ನ ಅಕ್ಟೋಬರ್ 13ರ ನಂತರ ಬೇರೆ ಕಡೆ ಶಿಫ್ಟ್​ ಮಾಡಲಾಗಿತ್ತು ಅಂತ ಹೇಳಲಾಗ್ತಿದೆ. ಆ ನಿಗೂಢ ಸ್ಥಳದಲ್ಲೇ ಜಯಲಲಿತಾ ವಿಧಿವಶರಾಗಿದ್ದರು. ಅವರು ಕೊನೆಯುಸಿರೆಳೆದ ನಂತರವೇ, ಅಪೋಲೋ ಆಸ್ಪತ್ರೆಗೆ ವಾಪಸ್​ ಕರೆತರಲಾಗಿತ್ತು ಅಂತ ಹೇಳಲಾಗ್ತಿದೆ.

ಪ್ಲ್ಯಾನ್ ಮಾಡಿದ್ದು ಚಿನ್ನಮ್ಮ !

ಜಯಲಲಿತಾ ಅವ್ರು ಆಸ್ಪತ್ರೆಗೆ ಅಡ್ಮಿಟ್ ಅಗಿದ್ದು ಸೆಪ್ಟೆಂಬರ್​ 22 ನೇ ತಾರೀಕು. ದಿನದಿಂದ ದಿನಕ್ಕೆ ಅವರ ಆರೋಗ್ಯ ತೀವ್ರವಾಗಿ ಹದಗೆಡ್ತಿರುತ್ತೆ. ಆದರೆ ಹೇಗಾದ್ರೂ ಮಾಡಿ ಅಮ್ಮನನ್ನ ಬದುಕಿಸಿಕೊಳ್ಳಬೇಕು ಅಂತ ಚಿನ್ನಮ್ಮ ಅಲಿಯಾಸ್ ಶಶಿಕಲಾ ಪ್ಲಾನ್ ಮಾಡ್ತಾಳೆ. ಕಾರಣ ಇಷ್ಟೇ, ಗೆಳತಿ ಮೇಲಿದ್ದ ಪ್ರೀತಿಯಿಂದಲ್ಲ, ಆಸ್ತಿ ಮತ್ತು ಅಧಿಕಾರವನ್ನ ಕೊಳ್ಳೆ ಹೊಡೀಬೇಕು ಅನ್ನೋ ತಂತ್ರದಿಂದ.

ಲಂಡನ್​​ನಿಂದ ವೈದ್ಯರನ್ನ ಕರೆಸಲಾಗುತ್ತೆ. ಅವರ ಸಲಹೆಯ ಮೇರೆಗೆ ಜಯಲಲಿತಾರನ್ನ ರಾತ್ರೋ ರಾತ್ರಿ ಅಪೋಲೋ ಆಸ್ಪತ್ರೆಯಿಂದ ಬೇರೆ ಕಡೆ ಶಿಫ್ಟ್ ಮಾಡಲಾಗುತ್ತೆ. ಸಿಸಿಟಿವಿ ದೃಶ್ಯಗಳನ್ನ ಡಿಲಿಟ್ ಮಾಡಿ, ಆಸ್ಪತ್ರೆ ಸುತ್ತ ನಿಶೇಧಾಜ್ಞೆ ಜಾರಿ ಮಾಡಿ ಯಾರಿಗೂ ಗೊತ್ತಿಲ್ಲದಂತೆ ಅಮ್ಮನನ್ನ ಲಂಡನ್​ಗೆ ಕರೆದುಕೊಂಡು ಹೋಗಿದ್ರು ಅಂತ ಹೇಳಲಾಗ್ತಿದೆ.

ಸುಬ್ರಹ್ಮಣಿಯನ್ ಸ್ವಾಮಿಗೂ ಗೊತ್ತಿತ್ತು !

ಅಕ್ಟೋಬರ್​ ಮೊದಲ ವಾರದಲ್ಲಿ ಜಯಲಲಿತಾರನ್ನ ಲಂಡನ್​ಗೆ ಕರೆದೊಯ್ಯಲಾಗಿತ್ತು. ಪ್ರಜ್ಞಾನ ಹೀನ ಸ್ಥಿತಿಯಲ್ಲಿದ್ದ ಜಯಲಲಿತಾ ಅವ್ರಿಂದ, ಮಹತ್ವದ ದಾಖಲೆ ಪತ್ರಗಳಿಗೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಂಡಿದ್ದಾರಡೆ ಅಂತ ಹೇಳಲಾಗುತ್ತಿದೆ. ಇನ್ನು ಜಯಲಲಿತಾರನ್ನ ಲಂಡನ್​ಗೆ ಶಿಫ್ಟ್ ಮಾಡಬಹುದು ಅನ್ನೋ ಸುಳಿವನ್ನ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಕೂಡ ಈ ಮೊದಲೇ ಟ್ವೀಟ್​ ಮಾಡಿದ್ರು.

ಲಂಡನ್​ ಆಸ್ಪತ್ರೆಯಲ್ಲಿದ್ದ  ಯಸ್.. ಇದು ಸುಬ್ರಹ್ಮಣಿಯನ್ ಸ್ವಾಮಿ ಮಾಡಿದ್ದ ಟ್ವಿಟ್​..  ಜೆ ಜಯಲಲಿತಾ ಅವ್ರನ್ನ  ಲಂಡನ್ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು ಅನ್ನೋ ಸುಳಿವನ್ನ ನೀಡಿದ್ರು. ಆದ್ರೆ ಈ ಟ್ವೀಟ್​ ಬರೋ ಮೊದಲೇ ಜಯಲಲಿತಾರನ್ನ ಲಂಡನ್​ಗೆ ಕರೆದೊಯ್ದಿದ್ರು ಅಂತ ಹೇಳಲಾಗ್ತಿದೆ. ರಿಚರ್ಡ್ ಬೀಲೇ ಚೆನ್ನೈಗೆ ಭೇಟಿ ನೀಡಿದಾಗಲೇ, ಅಮ್ಮನನ್ನ ಲಂಡನ್​ಗೆ ಕರೆದೊಯ್ದಿದ್ದರು ಅನ್ನೋ ಮಾತಿದೆ. ಅಂದ್ಹಾಗೆ ಆವತ್ತಿನಿಂದ ಲಂಡನ್​ ಆಸ್ಪತ್ರೆಯಲ್ಲೇ ಇದ್ದ ಜಯಲಲಿತಾರನ್ನ ಡಿಸೆಂಬರ್​ 4 ನೇ ತಾರೀಕು ಭಾನುವಾರ ಚೆನ್ನೈಗೆ ಮತ್ತೆ ಕರೆ ತರಲಾಗಿತ್ತು. ಆದ್ರೆ ಅಷ್ಟ್ರಲ್ಲಾಗಲೇ ಅವ್ರು ವಿಧಿವಶರಾಗಿದ್ದರು ಅನ್ನೋ ಮಾತಿದೆ.

ಭಾನುವಾರವೇ ವಿಧಿವಶರಾಗಿದ್ದರೇ ಅಮ್ಮ?

ಲಂಡನ್​ನಲ್ಲಿ ಜಯಲಲಿತಾಗೆ ಟ್ರೀಟ್​ಮೆಂಟ್​ ಕೊಡಲಾಗ್ತಿತ್ತು. ಆದ್ರೆ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಜಯಲಲಿತಾ ಭಾನುವಾರ ಅಂದ್ರೆ ಡಿಸೆಂಬರ್​ 4 ರಂದೇ ವಿಧಿವಶರಾಗಿದ್ರು ಅಂತ ಹೇಳಲಾಗ್ತಿದೆ. ಅವ್ರು ವಿಧಿವಶರಾದ ನಂತರ ಚೆನ್ನೈಗೆ ಪಾರ್ಥೀವ ಶರೀರ ತರಲಾಗಿತ್ತು. ಆ ತಕ್ಷಣವೇ ಗೌರ್ನರ್​ ಸೇರಿದಂತೆ ಮೊದಲಾದ ಜನನಾಯಕರಿಗೆ ಮಾಹಿತಿ ಮುಟ್ಟಿಸಲಾಗಿತ್ತು. ಆದ್ರೆ ರಾಜಕೀಯ ಮುಂದಾಳತ್ವ ವಹಿಸಿಕೊಳ್ಳುವವರೆಗೂ ನಿಧನದ ಸುದ್ದಿ ಹೊರ ಹಾಕಬಾರದು ಅಂತ ನಿರ್ಧರಿಸಿದ್ರು ಅನ್ಸುತ್ತೆ ಅಣ್ಣಾ ಡಿಎಂಕೆ ನಾಯಕರು.

ಪಾರ್ಥೀವ ಶರೀರ ಆಸ್ಪತ್ರೆಯಲ್ಲಿಟ್ಟುಕೊಂಡು ರಾಜಕೀಯ

ಜಯಲಲಿತಾ ವಿಧಿವಶರಾಗಿದ್ದಾರೆ ಅಂತ ಅದಾಗಲೇ ಎಲ್ಲರಿಗೂ ಗೊತ್ತಾಗಿತ್ತು. ಆದ್ರೆ ರಾಜಕೀಯವಾಗಿ ಪನೀರ್ ಸೆಲ್ವಂ ಸದೃಢವಾಗಬೇಕಿತ್ತು. ಹೀಗಾಗಿ ಅಮ್ಮನ ಪಾರ್ಥೀವ ಶರೀರ ಮುಂದಿಟ್ಟುಕೊಂಡು, ಶಾಸಕರ ಸಭೆ ಕರೆದರು. ಅಲ್ಲಿಂದ ಸೀದಾ ರಾಜಭವನಕ್ಕೆ ಹೋಗಿ, ಸಿಎಂ ಆಗಿ ಪ್ರಮಾಣಚವನವನ್ನೂ ಸ್ವೀಕರಿಸಿದ್ರು. ಇಷ್ಟೆಲ್ಲಾ ಆದ ನಂಥರ ಅಂತಿಮವಾಗಿ ಎಐಎಡಿಎಂಕೆ ಕಚೇರಿಯಲ್ಲಿ ಬಾವುಟವನ್ನ ಅರ್ಧಕ್ಕೆ ಇಳಿಸಲಾಗ್ತಿತ್ತು. ಅಮ್ಮನ ಸಾವಿನ ಸುದ್ದಿ ನಿಧಾನವಾಗಿ ಹೊರ ಬರ್ತಾ ಇತ್ತು. ಇದ್ರಿಂದ ರೊಚ್ಚಿಗೆದ್ದ ಅಮ್ಮನ ಅಭಿಮಾನಿಗಳು, ಆಸ್ಪತ್ರೆಗೆ ನುಗ್ಗಿಬಿಟ್ರು.

ಯಾವಾಗ ಆಸ್ಪತ್ರೆ ಛಿದ್ರವಾಗ್ತಿದೆ ಅಂತ ಗೊತ್ತಾಯ್ತೋ, ಅಪೋಲೋ ಆಸ್ಪತ್ರೆಯಿಂದ ಒಂದು ಪತ್ರಿಕಾ ಪ್ರಕಟಣೆ ಹೊರ ಬಿತ್ತು. ಅಮ್ಮ ಸತ್ತಿಲ್ಲ ಇನ್ನೂ ಬದುಕಿದ್ದಾರೆ ಅಂತ ಹೇಳಿಬಿಟ್ಟಿದ್ರು. ಅಂತಿಮವಾಗಿ ಡಿಸೆಂಬರ್​ 5 ನೇ ತಾರೀಕು,. ರಾತ್ರಿ 11.30ಕ್ಕೆ. ಎಲ್ಲರೂ ನಿದ್ದೆ ಮಾಡ್ತಿರುವಾಗ, ಅಮ್ಮ ವಿಧಿವಶರಾಗಿದ್ದಾರೆ ಅಂತ ಅಧಿಕೃತವಾಗಿ ಘೋಷಣೆ ಮಾಡಿದ್ರು ಆಸ್ಪತ್ರೆ ಸಿಬ್ಬಂದಿ.

ಇನ್ನು ಎಐಎಡಿಎಂಕೆ ಪಕ್ಷದ ಕಚೇರಿಯಿಂದಾನೇ ಅಮ್ಮ ಇನ್ನಿಲ್ಲ ಅನ್ನೋ ಟ್ವಿಟ್ ಮಾಡಲಾಗಿತ್ತು. ಅದೂ ಡಿಸೆಂಬರ್​ 5 ನೇ ತಾರೀಕು ಬೆಳಗ್ಗೆ 10.45ರ ಸುಮಾರಿಗೆ. ಆದ್ರೆ ಆಸ್ಪತ್ರೆಯವರು ಇದನ್ನ ಕನ್ಫರ್ಮ್ ಮಾಡಿದ್ದು ರಾತ್ರಿ 11.30ಕ್ಕೆ. ಅಲ್ಲೀವರೆಗೂ ಅಮ್ಮ ನ ಸ್ಥಿತಿ ಚಿಂತಾಜನಕವಾಗಿದೆ. ವಿಷಮ ಸ್ಥಿತಿಯಲ್ಲಿದೆ ಅಂತಾನೇ ಹೇಳಿಕೊಂಡು ಬಂದಿದ್ರು. ಪಕ್ಷದ ಬಾವುಟ ಅರ್ಧಕ್ಕೆ ಇಳಿಸಿದಾಗಲೂ ಆಸ್ಪತ್ರೆ ಸಿಬ್ಬಂದಿ ಅದನ್ನ ಅಲ್ಲಗೆಳೆದಿದ್ರು. ಅಂತಿಮವಾಗಿ ರಾತ್ರಿ 11.30ಕ್ಕೆ ಸಾವಿನ ಸುದ್ದಿಯನ್ನ ಹೊರ ಹಾಕಲಾಗಿತ್ತು.

ಇದೆಲ್ಲಾ ಕಳೆದ ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಹರಿದಾಡ್ತಿರೋ ಸುದ್ದಿ. ಆದ್ರೆ ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನ ಕೇಳಿದ್ರೆ, ಅಮ್ಮ ಆಸ್ಪತ್ರೆಯಲ್ಲೇ ಇದ್ರು ಅಂತಾರೆ. ‘ಅಮ್ಮ ಆಸ್ಪತ್ರೆಯಲ್ಲೇ ಇದ್ದರು. ನಾನು ಆವರ ಕೊಠಡಿಗೆ ಹೋದಾಗೆಲ್ಲಾ, ನಗು ಮುಖದಲ್ಲೇ ನೋಡ್ತಾ ಇದ್ರು. ನಾವು ಬಲವಂತ ಮಾಡಿ ಅವರಿಗೆ ಊಟ ಮಾಡಿಸುತ್ತಿದ್ದೆವು. ಉಪ್ಪಿಟ್ಟು, ಪೊಂಗಲ್, ಮೊಸರನ್ನ ಆಲೂಗಡ್ಡೆ ಕರಿಯನ್ನು ಅವರ ಅಡುಗೆಯವರು ಮಾಡಿ ತರುತ್ತಿದ್ದರು. 

ಒಂದೊಂದೇ ಚಮಚ ಆಹಾರ ನೀಡುತ್ತಿದ್ದೆವು. 16 ಮಂದಿ ನರ್ಸ್​ ಅವರ ಸೇವೆ ಮಾಡುತ್ತಿದ್ದೆವು. ನಮ್ಮ ಜೊತೆ ಖುಷಿಯಾಗಿ ಮಾತನಾಡುತ್ತಿದ್ದರು. ಅದೊಂದು ದಿನ ಅವರಿಗೆ ಚಹ ಕೊಟ್ಟಾಗ, ಅದು ಸರಿ ಇರಲಿಲ್ಲ ಅನ್ಸುತ್ತೆ. ನಮ್ಮ ಮನೆಗೆ ಬನ್ನಿ. ಅದ್ಭುತವಾದ ಕೊಡೈನಾಡು ಚಹ ನಾನೇ ಮಾಡಿ ಕೊಡುತ್ತೇನೆ ಎಂದಿದ್ದರು. ಭಾನುವಾರ ಸಂಜೆ ತಮಿಳು ಧಾರಾವಾಹಿ ನೋಡ್ತಾ ಇದ್ರು. ಆಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ತಕ್ಷಣ ಎಲ್ಲಾ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಲು ಆರಂಭಿಸಿದರು. ಆದರೆ ಸೋಮವಾರ ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ’

ಇದು ಆಸ್ಪತ್ರೆ ಸಿಬ್ಬಂದಿಗಳು ಹೇಳೋ ಮಾತು, ಹಾಗಿದ್ರೆ ಅಮ್ಮ ಆಸ್ಪತ್ರೆಯಲ್ಲೇ ಇದ್ರಾ? ಮತ್ಯಾಕೆ ಅವ್ರನ್ನ ಲಂಡನ್​ಗೆ ಶಿಫ್ಟ್ ಮಾಡಿದ್ರು ಅನ್ನೋ ಸುದ್ದಿ ಹಬ್ಬಿತ್ತು? ಅವ್ರು ಭಾನುವಾರವೇ ವಿಧಿವಶರಾಗಿದ್ರಾ?  ಸೋಮವಾರ ರಾತ್ರಿ ಹೊತ್ತು ಅಮ್ಮ ಅಸ್ತಂಗತರಾಗಿದ್ರು ಅನ್ನೋದಾದ್ರೆ, ಎಐಎಡಿಎಂಕೆ ಬೆಳಗ್ಗೇನೇ ಅಮ್ಮ ಇನ್ನಿಲ್ಲ ಅಂತ ಟ್ವೀಟ್ ಮಾಡಿದ್ಯಾಕೆ? ಈ ಪ್ರಶ್ನೆಗಳು ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕ್ತಿದೆ.

ಬದುಕಿನುದ್ದಕ್ಕೂ ಮುಳ್ಳಿನ ಹಾದಿಯಲ್ಲೇ ನಡೆದು ಬಂದಿದ್ದ ಜಯಲಲಿತಾಗೆ ಆಪ್ತರೇ ಆಪತ್ತು ತಂದಿದ್ರು. ಕೊನೆಯ ದಿನಗಗಳಲ್ಲೂ ಅಧಿಕಾರದ ಮೇಲಿನ ಆಸೆಯಿಂದ ಅಮ್ಮನನ್ನ ಕಾಡಿದ್ರು ಅನ್ನೋದು ದುರಂತ.

(ಸೂಚನೆ : ಜನರಾಡುವ ಕಪೋಕಲ್ಪಿತ ಮಾಹಿತಿಗಳನ್ನು ಆಧರಿಸಿದ ಸುದ್ದಿಯೇ ವಿನಃ ವಸ್ತುಸ್ಥಿತಿಯನ್ನು ಒಳಗೊಂಡಿರುವುದಿಲ್ಲ.)

Follow Us:
Download App:
  • android
  • ios