ಚೆನ್ನೈ(ಡಿ.05): ತಮಿಳುನಾಡು ಸಿಎಂ ಜಯಲಲಿತಾ ಇನ್ನಿಲ್ಲ. 73 ದಿನಗಳಿಂದ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಇಂದು ಸಂಜೆ ನಿಧನರಾಗಿದ್ದಾರೆ ಎಂದು ತಮಿಳುನಾಡಿನ 2 ಸುದ್ಧಿವಾಹಿನಿಗಳು ವರದಿ ಮಾಡಿವೆ. ಈ ಕುರಿತಂತೆ ಅಧಿಕೃತ ಘೋಷಣೆ ಬಾಕಿ
ಚೆನ್ನೈ(ಡಿ.05): ತಮಿಳುನಾಡು ಸಿಎಂ ಜಯಲಲಿತಾ ಇನ್ನಿಲ್ಲ. 73 ದಿನಗಳಿಂದ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಇಂದು ಸಂಜೆ ನಿಧನರಾಗಿದ್ದಾರೆ ಎಂದು ತಮಿಳುನಾಡಿನ 2 ಸುದ್ಧಿವಾಹಿನಿಗಳು ವರದಿ ಮಾಡಿವೆ. ಈ ಬಗ್ಗೇ ಇನ್ನೂ ಅಧಿಕೃತ ಘೋಷಣೆ ಬಾಕಿ ಇದೆ. ನಿನ್ನೆ ಹೃದಯಾಘಾತಕ್ಕೆ ಒಳಗಾಗಿದ್ದ ಜಯಲಲಿತಾ ಅವರನ್ನ ಬದುಕಿಸಲು ನಿನ್ನೆಯಿಂದ ವೈದ್ಯರು ನಡೆಸಿ ಅವಿರತ ಪ್ರಯತ್ನ ಫಲ ನೀಡಲಿಲ್ಲ.
73 ದಿನಗಳ ಹಿಂದೆ ಸೆಪ್ಸಿಸ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಸತತ ಚಿಕಿತ್ಸೆ ಬಳಿಕ ಚೇತರಿಸಿಕೊಂಡರೂ ಎನ್ನುವಷ್ಟರಲ್ಲಿ ನಿನ್ನೆ ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದರು. ಹೈಪ್ರೋಟೀನ್ ಡಯಟ್`ನಿಂದ ಪೊಟಾಶಿಯಂ ಹೆಚ್ಚಾಗಿ ಜಯಲಲಿತಾಗೆ ಹೃದಯಾಘಾತ ಸಂಭವಿಸಿತ್ತು. ನಿನ್ನೆ ಸಂಜೆಯಿಂದ ಜಯಲಲಿತಾಗೆ ಎಕ್ಮೋ ಚಿಕಿತ್ಸೆ ನೀಡಲಾಗುತ್ತಿತ್ತು.
ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ತೀವ್ರ ಪೊಲೀಸ್ ಕಟ್ಟೆಚ್ಚರವಹಿಸಲಾಗಿದೆ.
