Asianet Suvarna News Asianet Suvarna News

ಜಯಲಲಿತಾ ಆರೋಗ್ಯದ ಕೆಲ ಸಿಕ್ರೇಟ್'ಗಳು : ಆಸ್ಪತ್ರೆಗೆ ಯಾರನ್ನು ಬಿಡುತ್ತಿಲ್ಲವಂತೆ

Jayalalita health secret

ಚೆನ್ನೈ(ಸೆ.24): ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಹಚ್ಚಿಸಿ ಸಾರ್ವಜನಿಕರ ಹಾಗೂ ರಾಜಕಾರಣಿಗಳ ಮನಶಾಂತಿಯನ್ನು ಹದಗೆಡಿಸಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಅಲ್ಲಿನ ಜನಗಳ ಸ್ವಯಂಘೋಷಿತಾ ಆರಾಧ್ಯ ದೇವತೆ ಜಯಲಲಿತಾ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯನ್ನು ಸೇರಿದ್ದಾರೆ.

ಜಯಮ್ಮನ ಆರೋಗ್ಯ ಬೇಗ ಸರಿಯೋಗಿ ಇನ್ನು ಹಲವು 'ಅಮ್ಮ' ಯೋಜನೆಗಳನ್ನು ಘೋಷಿಸಬೇಕೆಂದು ಅಭಿಮಾನಿಗಳು ಹಾಗೂ ಹಿಂಬಾಲಕರು ಪ್ರತಿನಿತ್ಯವೂ ದೇವರನ್ನು ಬೇಡಿಕೊಳ್ಳುತ್ತಿದ್ದಾರಂತೆ.

ಆದರೆ ವಾಸ್ತವ ಪರಿಸ್ಥಿತಿಯೇ ಬೇರೆಯಿದೆ. ಜಯಲಲಿತಾ ಅವರ ಆರೋಗ್ಯ ಮೊದಲಿನ ರೀತಿಯಿಲ್ಲದೆ ಹಲವು ಏರುಪೇರಾಗಿದೆ.

 

ಇತ್ತೀಚಿಗೆ ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಆಗಿರುವ ಕೆಲ ಬದಲಾವಣೆಗಳು

1) ಜಯಲಲಿತಾ ಕರುಳು ಕೆಲಸ ಮಾಡುತ್ತಿಲ್ಲವಂತೆ!

2) ಜಯಲಲಿತಾಗೆ ಲಿವರ್ ಟ್ರಾನ್ಸ್​ಪ್ಲಾಂಟೇಷನ್ ಆಗಬೇಕಂತೆ!

3) ಕಿಡ್ನಿ ಸಮಸ್ಯೆಯಂತೆ. ಪ್ರತಿದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರಂತೆ

4) ಎರಡೂ ಕಿಡ್ನಿ ಕೆಲಸ ಮಾಡುತ್ತಿಲ್ಲವಂತೆ.. ಕಿಡ್ನಿ ಟ್ರಾನ್ಸ್​ಪ್ಲಾಂಟೇಷನ್ ಆಗ್ಬೇಕಂತೆ!

5) ಬ್ಲಡ್​ ಪ್ರೆಷರ್ ಮತ್ತು ಡಯಾಬಿಟೀಸ್ ತೀವ್ರತೆ ಹೆಚ್ಚಾಗಿದೆಯಂತೆ!

6) ಚಿಕಿತ್ಸೆಗಾಗಿ ಟೆಕ್ಸಾಸ್​ ಅಥವಾ ಸಿಂಗಾಪೂರ್​ಗೆ ಹೋಗಬೇಕಂತೆ

ಅನಾರೋಗ್ಯದ  ಕಾರಣ ಏನು ಅಂತ ನೋಡೋದಾದರೆ, ಜಯಲಲಿತಾ 2ನೇ ಬಾರಿ ಸಿಎಂ ಆದ ಮೇಲೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುವುದು ಬಹಳ ಕಡಿಮೆಯಾಗಿದೆ. ಜತೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಕೇವಲ 25 ನಿಮಿಷ ಮಾತ್ರ ಹಾಜರಿದ್ದರು. 2ನೇ ಬಾರಿ ಸಿಎಂ ಆದ ಮೆಲೆ ಕೇವಲ 2 ಬಾರಿ ಅಷ್ಟೆ ಸೆಕ್ರೆಟರಿಯೇಟ್ ಸಭೆ ನಡೆಸಿದ್ದಾರೆ. ಇನ್ನು 2ನೇ ಬಾರಿ ಸಿಎಂ ಆದ ಮೇಲೆ ಒಂದೇ ಒಂದು ಕ್ಯಾಬಿನೆಟ್ ಸಭೆ ಕೂಡ ನಡೆಸಿಲ್ಲ. ಅಷ್ಟೆ ಯಾಕೆ ಚೆನ್ನೈನಲ್ಲೇ ಇದ್ದರೂ ಬುಧವಾರ ಮೆಟ್ರೋ ಉದ್ಘಾಟಿಸಿದ್ದು  ಮಾತ್ರ ವಿಡಿಯೋ ಕಾನ್ಫರೆನ್ಸ್ ಮೂಲಕ.

ಇಷ್ಟೆಲ್ಲಾ  ಸೂಕ್ಷ್ಮವಾಗಿ ಗಮನಿಸಿದ ಮೇಲೆ ಜಯಲಲಿತಾರ ಅನಾರೋಗ್ಯದ ಬಗ್ಗೆ ಅನುಮಾನಗಳು ಎದ್ದಿದೆ. ಹೀಗಾಗಿ ಆಸ್ಪತ್ರೆ ಬಳಿ ಕಾರ್ಯಕರ್ತರು, ಅಭಿಮಾನಿಗಳು ಆಸ್ಪತ್ರೆಯತ್ತ ಜಮಾಯಿಸಿದ್ದಾರೆ. ಹೀಗಾಗಿ ಪೊಲೀಸರು ಆಸ್ಪತ್ರೆ ಸುತ್ತ ಬಿಗಿ ಬಂದೋಬಸ್ತ್ ​ಕೈಗೊಂಡಿದ್ದಾರೆ.  ಆದರೆ ಎಐಎಡಿಎಂಕೆ ಅಮ್ಮಾ ಎಲ್ಲೂ ಹೋಗಲ್ಲ. ಜಯಾ ಆರೋಗ್ಯ ಚೆನ್ನಾಗೇ ಇದೆ ಅಂತ ವಾದಿಸುತ್ತಿದೆ.  ಒಟ್ಟಾರೆ ತಮಿಳುನಾಡಿನ ಸಿಎಂ ಆರೋಗ್ಯ ಸ್ಥಿತಿ ಇನ್ನೂ ನಿಗೂಢವಾಗಿದೆ.

Latest Videos
Follow Us:
Download App:
  • android
  • ios