ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಿಂದ ವಿಚಾರಣೆ ಎದುರಿಸಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಜಯಚಂದ್ರನನ್ನು ವಶಕ್ಕೆ ಪಡೆಯಲು ಎಸಿಬಿ ಮುಂದಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಇಂದು ಜಯಚಂದ್ರ ವಶಕ್ಕಾಗಿ ಬಾಡಿ ವಾರಂಟ್​ ಪಡೆದಿದೆ. ನಾಳೆ ಜಯಚಂದ್ರನನ್ನು ಕೋರ್ಟ್​ಗೆ ಹಾಜರುಪಡಿಸಿ ಎಸಿಬಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯಲಿದ್ದಾರೆ.

ಬೆಂಗಳೂರು(ಡಿ.22): ಐಟಿ ದಾಳಿ ಬಳಿಕ ಜಯಚಂದ್ರ ಜೈಲು ಸೇರಿದ್ದಾಯ್ತು. ಈಗ ಜಾರಿ ನಿರ್ದೇಶನಾಲಯ ಎಫ್ಐಆರ್ ದಾಖಲಿಸಿದೆ. ಜಯಚಂದ್ರ ಮತ್ತಿತರ ಏಳು ಆರೋಪಿಗಳ ವಿಚಾರಣೆ ಮತ್ತು ತನಿಖೆಯ ವೇಳೆ ಚಿಕ್ಕರಾಯಪ್ಪ ಅಕ್ರಮದ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಾಕ್ಷಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ಸಧ್ಯದಲ್ಲೇ ಚಿಕ್ಕರಾಯಪ್ಪನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ.

ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಿಂದ ವಿಚಾರಣೆ ಎದುರಿಸಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಜಯಚಂದ್ರನನ್ನು ವಶಕ್ಕೆ ಪಡೆಯಲು ಎಸಿಬಿ ಮುಂದಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಇಂದು ಜಯಚಂದ್ರ ವಶಕ್ಕಾಗಿ ಬಾಡಿ ವಾರಂಟ್​ ಪಡೆದಿದೆ. ನಾಳೆ ಜಯಚಂದ್ರನನ್ನು ಕೋರ್ಟ್​ಗೆ ಹಾಜರುಪಡಿಸಿ ಎಸಿಬಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯಲಿದ್ದಾರೆ.

ಇನ್ನು ಎಲ್ಲ ಮುಗಿಯುವ ಹಂತಕ್ಕೆ ಬಂದಿರುವಾಗ ಎಸಿಬಿ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಜಯಚಂದ್ರನ ರಕ್ಷಣೆಗೆಂದೇ ಎಸಿಬಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ.

ಶಶಿಶೇಖರ್​ ಕ್ರೈಂ ಬ್ಯೂರೊ ಸುವರ್ಣ ನ್ಯೂಸ್​