ಪದ್ಮಾವತಿಯ ಖಿಲ್ಜಿಯಂತೆ ನನ್ನ ಕಾಡಿದ್ದ ಆಜಂಖಾನ್: ನಟಿ ಜಯಪ್ರದಾ

First Published 11, Mar 2018, 1:25 PM IST
Jaya Prada Says Alauddin Khiljis Character in Padmaavat Reminded Her of SP Leader Azam Khan
Highlights

2009ರಲ್ಲಿ ಉತ್ತರಪ್ರದೇಶದ ರಾಂಪುರ ವಿಧಾನಸಭಾ ಕ್ಷೇತ್ರದಿಂದ ಮರುಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಆಜಂಖಾನ್ ತಮ್ಮ ಹೆಸರನ್ನು ಕೆಡಿಸಲು ಇಲ್ಲದ ಕುತಂತ್ರಗಳನ್ನು ನಡೆಸಿದ್ದರು

ನವದೆಹಲಿ(ಮಾ.11): ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮಹಮ್ಮದ್ ಆಜಂಖಾನ್ ಅವರನ್ನು ನಟಿ ಜಯಪ್ರದಾ ಬಾಲಿವುಡ್‌ನ ಪದ್ಮಾವತ್ ಸಿನಿಮಾದ ಖಿಲ್ಜಿ ಪಾತ್ರಕ್ಕೆ ಹೋಲಿಕೆ ಮಾಡಿದ್ದಾರೆ. 2009ರಲ್ಲಿ ಉತ್ತರಪ್ರದೇಶದ ರಾಂಪುರ

ವಿಧಾನಸಭಾ ಕ್ಷೇತ್ರದಿಂದ ಮರುಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಆಜಂಖಾನ್ ತಮ್ಮ ಹೆಸರನ್ನು ಕೆಡಿಸಲು ಇಲ್ಲದ ಕುತಂತ್ರಗಳನ್ನು ನಡೆಸಿದ್ದರು ಎಂದು ಆರೋಪಿಸಿದ ಅವರು ‘ಪದ್ಮಾವತ್ ಸಿನಿಮಾ ವೀಕ್ಷಣೆಯ ವೇಳೆ ಸಿನಿಮಾದ ಖಿಲ್ಜಿ ಪಾತ್ರ, ಅಂದು ಚುನಾವಣೆಯ ವೇಳೆ ಅಜಂಖಾನ್ ನನಗೆ ಕಿರುಕುಳ ನೀಡಿದ್ದನ್ನು ನೆನಪಿಸಿತು ಎಂದು ಹೇಳಿದ್ದಾರೆ.

loader